2 Chronicles 9:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನಿಂದಾಗಿ ಜೆರುಸಲೇಮಿನಲ್ಲಿ ಬೆಳ್ಳಿಯು ಹೆಚ್ಚಾಗಿ, ಕಲ್ಲುಗಳಷ್ಟು ಸಾಮಾನ್ಯವಾಗಿತ್ತು. ಮಾತ್ರವಲ್ಲದೆ ದೇವದಾರು ಮರಗಳು ಬೆಟ್ಟಪ್ರದೇಶದಲ್ಲಿ ಬೆಳೆಯುವ ಸಿಕಮೋರ್ ಮರಗಳಂತೆ ಧಾರಾಳವಾಗಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯು ಕಲ್ಲಿನ ಹಾಗೆಯೂ, ದೇವದಾರು ಮರಗಳು ಇಳಿಜಾರು ಪ್ರದೇಶದಲ್ಲಿ ಬೆಳೆಯುವ ಅತ್ತಿ ಮರಗಳಂತೆ ಹೇರಳವಾಗಿದ್ದವು.
Kannada BSI Bible 2016
ಅರಸನು ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲು ಗಳ ಹಾಗೆಯೂ ದೇವದಾರು ಮರಗಳನ್ನು ತಗ್ಗಿನ ಲ್ಲಿರುವ ಆಲದ ಮರಗಳ ಹಾಗೆಯೂ ಬಹಳವಾಗಿ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರಸನ ಮುಖಾಂತರವಾಗಿ ಯೆರೂಸಲೇವಿುನಲ್ಲಿ ಬೆಳ್ಳಿಯು ಕಲ್ಲಿನ ಹಾಗೂ ದೇವದಾರು ಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳ ಹಾಗೂ ಹೇರಳವಾದವು.
Kannada Bible (KNCL) BSI 2016
ಅರಸನ ಕಾಲದಲ್ಲಿ ಜೆರುಸಲೇಮಿನಲ್ಲಿ ಬೆಳ್ಳಿ, ಕಲ್ಲಿನಂತೆಯೂ ದೇವದಾರು ಮರಗಳು, ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳಂತೆಯೂ ವಿಫುಲವಾಗಿ ಇದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.