2 Chronicles 9:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೊಲೊಮೋನನ ಮೇಜಿನ ಮೇಲೆ ಇಟ್ಟಿರುವ ಆಹಾರವನ್ನು ನೋಡಿದಳು. ಅವನ ಸೇವಕರು ಮಾಡುವ ಸೇವೆಯ ರೀತಿಯನ್ನು ಪರಿಶೀಲಿಸಿದಳು. ಅವರು ಧರಿಸುವ ಉಡುಪು, ಸಮವಸ್ತ್ರಗಳು, ದೇವಾಲಯಕ್ಕೆ ಹೋಗುವಾಗ ಮಾಡುವ ಮೆರವಣಿಗೆಗಳನ್ನು ಮತ್ತು ಯಜ್ಞಗಳನ್ನು ನೋಡಿದಳು. ಪ್ರತಿಯೊಂದು ವಿಷಯವನ್ನು ಆಕೆ ಗಮನಿಸಿದಾಗ ಅಚ್ಚರಿಗೊಂಡಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಭೋಜನ ಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ ಮತ್ತು ಅವರ ಉಡುಪುಗಳು, ಅವನ ಪಾನಸೇವಕರು, ಅವರ ಉಡುಪುಗಳು ಇವುಗಳನ್ನೂ, ಅರಸನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗ ಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ
Kannada BSI Bible 2016
ಅವನ ಮೇಜಿನ ಭೋಜನವನ್ನೂ ಅವನ ಸೇವಕರು ಕೂತಿರುವದನ್ನೂ ನಿಂತಿರುವದನ್ನೂ ಅವನ ವಸ್ತ್ರಗಳನ್ನೂ ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ ಅವನು ಕರ್ತನ ಆಲಯಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಅವಳಿಗೆ ವಿಸ್ಮಯವಾಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಭೋಜನ ಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ ಮತ್ತು ಅವರ ಉಡುಪುಗಳು, ಅವನ ಪಾನಸೇವಕರು, ಅವರ ಉಡುಪುಗಳು ಇವುಗಳನ್ನೂ ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ
Kannada Bible (KNCL) BSI 2016
ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿದ್ದ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ ಮತ್ತು ಅವರ ಉಡುಪುಗಳು, ಅವನ ಪಾನಸೇವಕರು, ಅವರ ಉಡುಪುಗಳು ಇವುಗಳನ್ನೆಲ್ಲಾ ನೋಡಿದಳು. ಅಂತೆಯೇ ಅವನು ಸರ್ವೇಶ್ವರನ ಆಲಯದಲ್ಲಿ ಸಮರ್ಪಿಸುತ್ತಿದ್ದ ದಹನ ಬಲಿಗಳನ್ನೂ ಗಮನಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.