2 Corinthians 1:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಮಗೆ ಸಂಕಷ್ಟಗಳಿರುವುದಾದರೆ, ಆ ಸಂಕಷ್ಟಗಳು ನಿಮ್ಮ ಆದರಣೆಗಾಗಿಯೇ ಮತ್ತು ರಕ್ಷಣೆಗಾಗಿಯೇ. ನಮಗೆ ಆದರಣೆ ಇರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ನಮಗಿರುವಂಥ ಬಾಧೆಗಳನ್ನು ನೀವು ತಾಳ್ಮೆಯಿಂದ ಸ್ವೀಕರಿಸಿಕೊಳ್ಳಲು ಇದು ನಿಮಗೆ ಸಹಾಯವಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾವು ಕಷ್ಟಗಳನ್ನನುಭವಿಸುವುದರಿಂದ ನಿಮಗೆ ಆದರಣೆಯೂ, ರಕ್ಷಣೆಯೂ ಉಂಟಾಗುತ್ತದೆ. ನಾವು ಸಮಾಧಾನದಿಂದಿರುವುದಾದರೆ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ.
Kannada BSI Bible 2016
ನಾವು ಸಂಕಟ ಪಟ್ಟರೆ ಅದು ನಿಮ್ಮ ಆದರಣೆಗಾಗಿಯೂ ರಕ್ಷಣೆಗಾಗಿಯೂ ಆಗಿದ್ದು ನಾವು ಅನುಭವಿಸುವ ಶ್ರಮೆಗಳಲ್ಲಿ ತಾಳ್ಮೆಯುಳ್ಳವರಾಗುವಂತೆ ಅವು ಪರಿಣಮಿಸುತ್ತವೆ; ಇಲ್ಲವೆ ನಾವು ಆದರಿಸಲ್ಪಟ್ಟರೆ ಅದು ನಿಮ್ಮ ಆದರಣೆಗಾಗಿ ಮತ್ತು ರಕ್ಷಣೆಗಾಗಿ ಇರುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಮಗೆ ಸಂಕಟಬರುತ್ತದೋ ಅದರಿಂದ ನಿಮಗೆ ಧೈರ್ಯವೂ ರಕ್ಷಣೆಯೂ ಉಂಟಾಗುತ್ತದೆ; ನಮಗೆ ಸಂಕಟ ಪರಿಹಾರವಾಗುತ್ತದೋ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ.
Kannada Bible (KNCL) BSI 2016
ನಾವು ಕಷ್ಟಸಂಕಟಗಳನ್ನು ಸಹಿಸಬೇಕಾಗುವುದು ಸಹ ನಿಮ್ಮ ಉಪಶಮನ ಹಾಗೂ ಸಾಂತ್ವನಕ್ಕಾಗಿಯೇ. ನಮ್ಮ ಕಷ್ಟಸಂಕಟಗಳು ನಿವಾರಣೆಯಾದರೆ ಅದೂ ನಿಮ್ಮ ಆದರಣೆಗಾಗಿಯೇ. ನಾವು ಪಡುವ ಯಾತನೆಯನ್ನು ನೀವು ಸಹನೆಯಿಂದ ಅನುಭವಿಸುವಂತೆ ಅದು ಹುರಿದುಂಬಿಸುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಮಗೆ ಕಷ್ಟಸಂಕಟಗಳು ಬಂದರೆ, ಅದು ನಿಮ್ಮ ಆದರಣೆ ಮತ್ತು ರಕ್ಷಣೆಗೋಸ್ಕರವೇ ಇರುತ್ತದೆ. ನಾವು ಸಂತೈಸುವಿಕೆಯನ್ನು ಹೊಂದಿರುವುದಾದರೆ, ಅದು ನಿಮ್ಮ ಆದರಣೆಗಾಗಿಯೇ. ಆ ಆದರಣೆಯು ನಮ್ಮಂತೆ ನೀವು ಅನುಭವಿಸುವ ಕಷ್ಟಸಂಕಟಗಳನ್ನು ಸಹನೆಯಿಂದ ಅನುಭವಿಸುವಂತೆ ಮಾಡುವುದು.