2 Corinthians 10:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಿಮ್ಮ ಪಟ್ಟಣಕ್ಕೆ ದೂರವಾಗಿರುವ ಸ್ಥಳಗಳಲ್ಲಿಯೂ ಸುವಾರ್ತೆಯನ್ನು ತಿಳಿಸಬೇಕೆಂಬ ಅಪೇಕ್ಷೆ ನಮಗುಂಟು. ಮತ್ತೊಬ್ಬ ವ್ಯಕ್ತಿಯ ಪ್ರದೇಶದಲ್ಲಿ ಈಗಾಗಲೇ ಮಾಡಲ್ಪಟ್ಟಿರುವ ಕೆಲಸದ ಬಗ್ಗೆ ಹೊಗಳಿಕೊಳ್ಳಬೇಕೆಂಬ ಅಪೇಕ್ಷೆ ನಮಗಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ.
Kannada BSI Bible 2016
ನಿಮಗೆ ಆಚೆ ಇರುವ ಸೀಮೆಗಳಲ್ಲಿ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆ ನಮಗುಂಟು; ಆದರೆ ಮತ್ತೊಬ್ಬರ ಮೇರೆಯಲ್ಲಿ ಸಿದ್ಧವಾಗಿರುವವುಗಳು ನಮಗೆ ಸಿಕ್ಕಿದವುಗಳೆಂದು ನಾವು ಹೆಚ್ಚಳಪಡುವದಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮಗೆ ಆಚೆ ಇರುವ ಸೀಮೆಗಳಲ್ಲಿ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆ ನಮಗುಂಟು. ಮತ್ತೊಬ್ಬರ ಮೇರೆಯಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವದಿಲ್ಲ.
Kannada Bible (KNCL) BSI 2016
ಮತ್ತೊಬ್ಬರ ಕ್ಷೇತ್ರದ ಸೇವಾಫಲಗಳನ್ನು ನಮ್ಮದೆಂದು ಹೊಗಳಿಕೊಳ್ಳದೆ, ನಿಮ್ಮ ಗಡಿಯಾಚೆಯ ನಾಡುಗಳಲ್ಲೂ ಶುಭಸಂದೇಶವನ್ನು ಸಾರಬೇಕೆಂಬುದೇ ನಮ್ಮ ಆಶಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ, ನಿಮ್ಮ ಪ್ರದೇಶಗಳಿಗೆ ಆಚೆ ಇರುವ ಸ್ಥಳಗಳಲ್ಲಿಯೂ ನಾವು ಸುವಾರ್ತೆಯನ್ನು ಸಾರಬೇಕು. ಇತರರು ಮಾಡಿದ ಸೇವಾಕ್ಷೇತ್ರದಲ್ಲಿ ನಾವು ಸೇವೆಮಾಡಿ, ಹೆಚ್ಚಳ ಪಡುವುದಕ್ಕೆ ನಮಗಿಷ್ಟವಿಲ್ಲ.