2 Corinthians 11:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನಿಮಗೆ ಮತ್ತೆ ಹೇಳುವುದೇನೆಂದರೆ, ನನ್ನನ್ನು ಬುದ್ಧಿಹೀನನೆಂದು ಯಾರೂ ಯೋಚಿಸಕೂಡದು. ಬುದ್ಧಿಹೀನನೆಂದು ನೀವು ಯೋಚಿಸುವುದಾಗಿದ್ದರೆ, ನೀವು ಬದ್ಧಿಹೀನನನ್ನು ಸ್ವೀಕರಿಸಿಕೊಳ್ಳುವಂತೆ ನನ್ನನ್ನು ಸ್ವೀಕರಿಸಿಕೊಳ್ಳಿರಿ. ಆಗ ನಾನು ಸ್ವಲ್ಪ ಹೆಮ್ಮೆಪಡಲು ಸಾಧ್ಯವಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾರೂ ನನ್ನನ್ನು ಬುದ್ಧಿಹೀನನೆಂದು ತಿಳಿಯಬಾರದೆಂದು ತಿರುಗಿ ಹೇಳುತ್ತೇನೆ. ಹಾಗೆ ನೆನಸಿದರೂ ಚಿಂತೆಯಿಲ್ಲ. ನನ್ನನ್ನು ಬುದ್ಧಿಹೀನನಾಗಿಯೇ ಸ್ವೀಕರಿಸಿ. ಆಗ ನಾನು ಆತ್ಮ ಪ್ರಶಂಸೆ ಮಾಡಿಕೊಳ್ಳಲು ಅಲ್ಪಸ್ವಲ್ಪವಾದರೂ ಆಸ್ಪದವಾಗುತ್ತದೆ.
Kannada BSI Bible 2016
ನನ್ನನ್ನು ಬುದ್ಧಿಹೀನನೆಂದು ಯಾರೂ ನೆನಸಬಾರ ದೆಂದು ತಿರಿಗಿ ನಾನು ಹೇಳುತ್ತೇನೆ ಹಾಗೆ ನೆನಸಿದರೂ ನನ್ನನ್ನು ಬುದ್ಧಿಹೀನನಾಗಿಯಾದರೂ ಸೇರಿಸಿಕೊಳ್ಳಿರಿ; ಯಾಕಂದರೆ ನಾನು ಸಹ ಅಲ್ಪ ಸ್ವಲ್ಪ ಹೊಗಳಿಕೊಳ್ಳ ಬೇಕೆಂದಿದ್ದೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನನ್ನನ್ನು ಬುದ್ಧಿಹೀನನೆಂತ ಯಾರೂ ನೆನಸಬಾರದೆಂದು ತಿರಿಗಿ ಹೇಳುತ್ತೇನೆ; ಹಾಗೆ ನೆನಸಿದರೂ ನನ್ನನ್ನು ಬುದ್ಧಿಹೀನನಾಗಿಯಾದರೂ ಸೇರಿಸಿಕೊಳ್ಳಿರಿ; ಯಾಕಂದರೆ ನಾನು ಸಹ ಅಲ್ಪಸ್ವಲ್ಪ ಹೊಗಳಿಕೊಳ್ಳಬೇಕೆಂದಿದ್ದೇನೆ.
Kannada Bible (KNCL) BSI 2016
ನನ್ನನ್ನು ಯಾರೂ ಹುಚ್ಚನೆಂದು ಭಾವಿಸದಿರಲಿ, ಎಂದು ಮತ್ತೆ ಹೇಳುತ್ತೇನೆ. ಒಂದು ವೇಳೆ ಹಾಗೆ ಭಾವಿಸಿದರೂ ಚಿಂತೆಯಿಲ್ಲ. ನನ್ನನ್ನು ಹುಚ್ಚನಾಗಿಯೇ ಸ್ವೀಕರಿಸಿ. ಆಗ ನಾನು ಆತ್ಮಪ್ರಶಂಸೆ ಮಾಡಿಕೊಳ್ಳಲು ಅಲ್ಪಸ್ವಲ್ಪವಾದರೂ ಆಸ್ಪದವಾಗುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಬುದ್ಧಿಹೀನನೆಂದು ಯಾರೂ ನೆನಸಬಾರದೆಂದು ನಾನು ತಿರುಗಿ ಹೇಳುತ್ತೇನೆ. ಒಂದು ವೇಳೆ ಹಾಗೆ ನೆನಸಿದರೆ, ನೀವು ಬುದ್ಧಿಹೀನರನ್ನು ಸ್ವೀಕರಿಸುವಂತೆಯೇ, ನನ್ನನ್ನೂ ಸ್ವೀಕರಿಸಿರಿ. ಆಗ ನನ್ನನ್ನು ನಾನೇ ಪ್ರಶಂಶಿಸಿಕೊಳ್ಳಲು ನನಗೆ ಆಸ್ಪದವಾಗುವುದು.