2 Corinthians 12:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ನಿಮಗೆ ಭಾರವಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಸುಳ್ಳು ಹೇಳಿ ಕುತಂತ್ರದಿಂದ ನಿಮ್ಮನ್ನು ಬಲೆಗೆ ಬೀಳಿಸುವವನಾಗಿದ್ದೇನೆಂದು ನೀವು ಯೋಚಿಸಿಕೊಂಡಿದ್ದೀರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಹೀಗಿರಲು, ನಾನು ನಿಮಗೆ ಭಾರವಾಗಲಿಲ್ಲ, ಆದರೆ ಉಪಾಯದಿಂದ ನಿಮ್ಮನ್ನು ಸಂಚುಹೂಡಿ ಹಿಡಿದೆನು ಎಂದು ಹೇಳಿರಿ.
Kannada BSI Bible 2016
ಅದಿರಲಿ, ನಾನು ನಿಮಗೆ ಭಾರವಿಲ್ಲದ ವನಾಗಿದ್ದಾಗ್ಯೂ ಯುಕ್ತಿಯುಳ್ಳವನಾಗಿ ನಾನು ನಿಮ್ಮನ್ನು ಉಪಾಯದಿಂದ ಹಿಡಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ವೇಳೆ ನೀವು - ಅದಿರಲಿ, ತಾನು ನಮಗೆ ಭಾರವಾಗದೆ ಹೋದರೂ ಯುಕ್ತಿಯುಳ್ಳವನಾಗಿದ್ದು ನಮ್ಮನ್ನು ಉಪಾಯದಿಂದ ಸುಲುಕೊಂಡನೆಂದು ಹೇಳೀರಿ.
Kannada Bible (KNCL) BSI 2016
ನಾನೇನೂ ನಿಮಗೆ ಹೊರೆಯಾಗಿರಲಿಲ್ಲ ಎಂಬುದನ್ನು ನೀವು ಒಪ್ಪಿಕೊಂಡರೂ ಯುಕ್ತಿಯಿಂದ ನಿಮ್ಮನ್ನು ನಾನು ದುರುಪಯೋಗಪಡಿಸಿಕೊಂಡೆ ಎಂದು ನಿಮ್ಮಲ್ಲಿ ಯಾರಾದರೂ ಹೇಳಬಹುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏನೇ ಇದ್ದರೂ, ನಾನು ನಿಮಗೆ ಭಾರವಾಗಿರಲಿಲ್ಲ; ನಾನು ಯುಕ್ತಿಯುಳ್ಳವನಾಗಿ ನಿಮ್ಮನ್ನು ಉಪಾಯದಿಂದ ಸುಲಿದುಕೊಂಡೆನೋ?