2 Corinthians 12:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮ ಬಳಿಗೆ ಹೋಗಬೇಕೆಂದು ತೀತನನ್ನು ಕೇಳಿಕೊಂಡೆನು. ಅಲ್ಲದೆ ನಮ್ಮ ಸಹೋದರನನ್ನು ಅವನೊಂದಿಗೆ ಕಳುಹಿಸಿದೆನು. ಅವನು ನಿಮ್ಮನ್ನು ಮೋಸಗೊಳಿಸಲಿಲ್ಲ. ಅವನು ಮೋಸ ಮಾಡಿದನೇ? ಇಲ್ಲ! ಅವನು ಮತ್ತು ನಾನು ಒಂದೇ ಆತ್ಮನಿಂದ ಪ್ರೇರಿತರಾಗಿ ಒಂದೇ ರೀತಿಯಲ್ಲಿ ನಡೆದುಕೊಂಡೆವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಬಳಿಗೆ ಹೋಗುವುದಕ್ಕೆ ನಾನು ತೀತನನ್ನು ಬೇಡಿಕೊಂಡು ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿ ಕೊಟ್ಟೆನು, ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ? ನಾವಿಬ್ಬರೂ ಒಂದೇ ಹಾದಿಯಲ್ಲಿ ನಡೆಯಲಿಲ್ಲವೋ? ನಾವು ಅದೇ ಕ್ರಮದಲ್ಲಿ ಹೆಜ್ಜೆ ಇಡಲಿಲ್ಲವೋ?
Kannada BSI Bible 2016
ನಾನು ತೀತನನ್ನು ಅಪೇಕ್ಷಿಸಿ ಅವನ ಜೊತೆಯಲ್ಲಿ ಒಬ್ಬ ಸಹೋದರನನ್ನು ಕಳುಹಿಸಿಕೊಟ್ಟೆನು; ತೀತನು ನಿಮ್ಮಿಂದ ಏನಾದರೂ ಲಾಭವನ್ನು ಪಡೆದು ಕೊಂಡನೋ? ನಾವಿಬ್ಬರೂ ಒಂದೇ ಆತ್ಮನಿಂದ ನಡೆಯಲಿಲ್ಲವೋ? ನಾವು ಒಂದೇ ತರವಾದ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಬಳಿಗೆ ಹೋಗುವದಕ್ಕೆ ನಾನು ತೀತನನ್ನು ಬೇಡಿಕೊಂಡು ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿಕೊಟ್ಟೆನಷ್ಟೆ. ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ; ನಾವಿಬ್ಬರೂ ಒಬ್ಬ ಆತ್ಮನಿಂದಲೇ ಪ್ರೇರಿತರಾಗಿ ಒಂದೇ ಹೆಜ್ಜೆಜಾಡಿನಲ್ಲಿ ನಡೆಯಲಿಲ್ಲವೋ?
Kannada Bible (KNCL) BSI 2016
ನನ್ನ ಕೋರಿಕೆಯಂತೆಯೇ ತೀತನು ನಿಮ್ಮ ಬಳಿಗೆ ಬಂದದ್ದು; ಆತನ ಸಂಗಡ ಒಬ್ಬ ಸಹೋದರನನ್ನೂ ಕಳುಹಿಸಿದೆ. ತೀತನು ನಿಮ್ಮನ್ನು ವಂಚಿಸಿ ಏನಾದರೂ ಪ್ರಯೋಜನ ಪಡೆದದ್ದುಂಟೇ? ಎಂದಿಗೂ ಇಲ್ಲ. ನಾವಿಬ್ಬರು ಒಂದೇ ಮನೋಭಾವನೆಯಿಂದ ವರ್ತಿಸಲಿಲ್ಲವೇ? ಒಂದೇ ರೀತಿಯಲ್ಲಿ ನಡೆದುಕೊಳ್ಳಲಿಲ್ಲವೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಬಳಿಗೆ ಹೋಗುವುದಕ್ಕೆ ನಾನು ತೀತನನ್ನು ಒತ್ತಾಯಪಡಿಸಿ, ಅವನ ಜೊತೆಯಲ್ಲಿ ಆ ಸಹೋದರನನ್ನು ಕಳುಹಿಸಿಕೊಟ್ಟೆನು. ತೀತನು ನಿಮ್ಮನ್ನು ವಂಚಿಸಿ ಏನಾದರೂ ತೆಗೆದುಕೊಂಡನೋ? ನಾವಿಬ್ಬರೂ ಒಂದೇ ಆತ್ಮದಲ್ಲಿ ನಡೆದು ಒಂದೇ ಹೆಜ್ಜೆ ಜಾಡಿನಲ್ಲಿ ನಡೆಯಲಿಲ್ಲವೋ?