2 Corinthians 2:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದರೆ, ನಾನೂ ಆ ವ್ಯಕ್ತಿಯನ್ನು ಕ್ಷಮಿಸುತ್ತೇನೆ. ನಾನು ಕ್ಷಮಿಸಿದ್ದನ್ನು ನಿಮಗೋಸ್ಕರವಾಗಿಯೇ ಕ್ಷಮಿಸಿದ್ದೇನೆ. ನಾನು ಕ್ಷಮಿಸಬೇಕಾದದ್ದನ್ನೆಲ್ಲ ಕ್ಷಮಿಸಿದ್ದೇನೆ ಮತ್ತು ಕ್ರಿಸ್ತನೇ ನನ್ನೊಂದಿಗೆ ಇದ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ಯಾರನ್ನು ಕ್ಷಮಿಸುತ್ತೀರೋ ನಾನು ಸಹ ಅವನನ್ನು ಕ್ಷಮಿಸುತ್ತೇನೆ. ನಿಮಗೋಸ್ಕರವೇ ಅವನನ್ನು ಕ್ರಿಸ್ತನ ಸನ್ನಿಧಾನದಲ್ಲಿ ಕ್ಷಮಿಸಿದ್ದೇನೆ.
Kannada BSI Bible 2016
ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ ನಾನು ಸಹ ಮನ್ನಿಸುತ್ತೇನೆ; ನಾನು ಯಾವದನ್ನಾದರೂ ಮನ್ನಿಸಿದ್ದರೆ ಕ್ರಿಸ್ತನ ಸನ್ನಿಧಾನದಲ್ಲಿ ನಿಮ್ಮ ನಿಮಿತ್ತವೇ ಮನ್ನಿಸಿದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಯಾರಿಗೆ ಯಾವದನ್ನು ಮನ್ನಿಸುತ್ತೀರೋ ನಾನು ಸಹ ಮನ್ನಿಸುತ್ತೇನೆ. ನಾನು ಯಾವದನ್ನಾದರೂ ಮನ್ನಿಸಿದ್ದರೆ ಕ್ರಿಸ್ತನ ಸನ್ನಿಧಾನದಲ್ಲಿ ನಿಮ್ಮ ನಿವಿುತ್ತವೇ ಮನ್ನಿಸಿದೆನು.
Kannada Bible (KNCL) BSI 2016
ನೀವು ಯಾರನ್ನು ಕ್ಷಮಿಸುತ್ತೀರೋ ಅವನನ್ನು ನಾನೂ ಕ್ಷಮಿಸುತ್ತೇನೆ. ನಾನು ಯಾವುದನ್ನಾದರೂ ಕ್ಷಮಿಸಿದ್ದರೆ ಅಥವಾ ಕ್ಷಮಿಸಬೇಕಾಗಿದ್ದರೆ ಅದನ್ನು ಕ್ರಿಸ್ತಯೇಸುವಿನ ಸಮ್ಮುಖದಲ್ಲಿ ನಿಮಗೋಸ್ಕರ ಕ್ಷಮಿಸುತ್ತೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ಯಾರನ್ನಾದರೂ ಕ್ಷಮಿಸಿದರೆ, ನಾನು ಅವರನ್ನು ಕ್ಷಮಿಸುವೆನು. ನಾನು ಯಾರನ್ನಾದರೂ ಕ್ಷಮಿಸಿದರೆ, ನಿಮ್ಮ ನಿಮಿತ್ತವಾಗಿಯೇ ಕ್ರಿಸ್ತ ಯೇಸುವಿನ ಸನ್ನಿಧಾನದಲ್ಲಿ ಕ್ಷಮಿಸುವೆನು.