2 Corinthians 2:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮ ಸಭೆಯ ಒಬ್ಬನು ದುಃಖವನ್ನು ಉಂಟುಮಾಡಿದ್ದು ನನಗಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವನು ನಿಮ್ಮೊಲ್ಲರಿಗೂ ದುಃಖವನ್ನು ಉಂಟುಮಾಡಿದ್ದಾನೆ. (ಅದು ತನ್ನ ವಾಸ್ತವ ಸ್ಥಿತಿಗಿಂತ ಹೆಚ್ಚು ಕೆಟ್ಟದ್ದಾಗಿ ಕಾಣುವಂತೆ ಮಾಡಲು ನನಗೆ ಇಷ್ಟವಿಲ್ಲ.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮನಸ್ಸಿಗೆ ನೋವುಂಟುಮಾಡಿದವನು ಒಬ್ಬನು ನಿಮ್ಮಲ್ಲಿ ಇದ್ದರೂ ಅವನು ನನ್ನನ್ನು ಮಾತ್ರ ದುಃಖಪಡಿಸದೆ ನಿಮ್ಮಲ್ಲಿ ಬಹುಜನರನ್ನೂ ನೋಯಿಸಿದ್ದಾನೆ. ಆ ದುಃಖವು ಎಲ್ಲರಲ್ಲಿಯೂ ಉಂಟಾಯಿತೆಂದು ನಾನು ಹೇಳುವುದಿಲ್ಲ.
Kannada BSI Bible 2016
ಆದರೆ ನಾನು ನಿಮ್ಮ ಮೇಲೆ ವಿಶೇಷವಾದ ಭಾರವನ್ನು ಹಾಕದಂತೆ ಯಾವನಾದರೂ ದುಃಖ ವನ್ನುಂಟು ಮಾಡಿದ್ದರೆ ಅವನು ಸ್ವಲ್ಪ ಮಟ್ಟಿಗೆ ನನ್ನನ್ನು ದುಃಖಪಡಿಸಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ದುಃಖವನ್ನು ಉಂಟುಮಾಡಿರುವವನೊಬ್ಬನು ನಿಮ್ಮಲ್ಲಿ ಇದ್ದರೂ ಅವನು ನನ್ನನ್ನು ಮಾತ್ರ ದುಃಖಪಡಿಸದೆ ನಿಮ್ಮಲ್ಲಿ ಬಹು ಜನರನ್ನೂ ದುಃಖಪಡಿಸಿದ್ದಾನೆ; ಆ ದುಃಖವು ಎಲ್ಲರಲ್ಲಿಯೂ ಉಂಟಾಯಿತೆಂದು ನಾನು ಹೇಳುವದಿಲ್ಲ.
Kannada Bible (KNCL) BSI 2016
ಒಬ್ಬನು ದುಃಖವನ್ನುಂಟುಮಾಡಿದ್ದಾನಾದರೆ, ಅವನು ಹಾಗೆ ಮಾಡಿದ್ದು ನನಗೊಬ್ಬನಿಗೇ ಅಲ್ಲ. ಒಂದು ವಿಧದಲ್ಲಿ ನಿಮಗೆಲ್ಲರಿಗೂ ಸಹ ದುಃಖವನ್ನುಂಟುಮಾಡಿದ್ದಾನೆ. ಅವನ ಮೇಲೆ ಹೆಚ್ಚು ಕಠಿಣನಾಗಿರಲು ನನಗೆ ಇಷ್ಟವಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮಲ್ಲಿ ಯಾರಾದರೂ ನನ್ನನ್ನು ದುಃಖಪಡಿಸಿದರೆ, ಅವನು ನನ್ನನ್ನು ಮಾತ್ರವೇ ದುಃಖ ಪಡಿಸದೆ, ಒಂದು ವಿಧದಲ್ಲಿ ನಿಮ್ಮೆಲ್ಲರನ್ನೂ ದುಃಖಪಡಿಸಿದ್ದಾನೆ. ಅವನ ಮೇಲೆ ಬಹಳ ಕಠಿಣನಾಗಿರಲು ನನಗೆ ಇಷ್ಟವಿಲ್ಲ.