2 Corinthians 4:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು.
Kannada BSI Bible 2016
ನಾವು ಕಾಣು ವಂಥವುಗಳನ್ನು ದೃಷ್ಟಿಸದೆ ಕಾಣದಿರುವಂಥವುಗಳನ್ನು ದೃಷ್ಟಿಸುವವರಾಗಿದ್ದೇವೆ; ಯಾಕಂದರೆ ಕಾಣುವಂಥ ವುಗಳು ಸ್ವಲ್ಪಕಾಲ ಮಾತ್ರ ಇರುವವು; ಕಾಣದಿರುವಂಥ ವುಗಳು ಸದಾಕಾಲವೂ ಇರುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು.
Kannada Bible (KNCL) BSI 2016
ನಮ್ಮ ಗಮನವು ಕೇಂದ್ರೀಕೃತವಾಗಿರುವುದು ಗೋಚರವಾದುವುಗಳ ಮೇಲಲ್ಲ, ಅಗೋಚರವಾದುವುಗಳ ಮೇಲೆ. ಗೋಚರವಾದುವುಗಳು ತಾತ್ಕಾಲಿಕ; ಅಗೋಚರವಾದುವುಗಳು ಶಾಶ್ವತ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ನಮ್ಮ ದೃಷ್ಟಿಯು ದೃಶ್ಯ ಸಂಗತಿಗಳ ಮೇಲಿರದೆ, ಅದೃಶ್ಯವಾದವುಗಳ ಮೇಲೆ ಇವೆ. ಕಾಣುವವುಗಳು ತಾತ್ಕಾಲಿಕವಾದವುಗಳು. ಆದರೆ ಕಾಣದಿರುವಂಥದ್ದು ನಿತ್ಯವಾಗಿರುವುದು.