2 Corinthians 5:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.
Kannada BSI Bible 2016
ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿ ಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹೊಗಳಿಕೊಳ್ಳದೆ ತೋರಿಕೆಯ ವಿಷಯದಲ್ಲಿ ಮಾತ್ರ ಹೊಗಳಿಕೊಳ್ಳುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳು ವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯ ದಲ್ಲಿ ಹೆಚ್ಚಳಪಡುವದಕ್ಕೆ ನಿಮಗೆ
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹಿಗ್ಗದೆ ತೋರಿಕೆಯ ವಿಷಯದಲ್ಲಿ ಮಾತ್ರ ಹಿಗ್ಗುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳುವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯದಲ್ಲಿ ಹಿಗ್ಗುವದಕ್ಕೆ ನಿಮಗೆ ಆಸ್ಪದಕೊಡುತ್ತೇವೆ.
Kannada Bible (KNCL) BSI 2016
ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬಾರದು. ನಮ್ಮನ್ನು ಕುರಿತು ನೀವೇ ಹೆಚ್ಚಳಪಡುವಂತೆ ಒಂದು ಅವಕಾಶವನ್ನು ಒದಗಿಸುತ್ತಿದ್ದೇವೆ, ಅಷ್ಟೆ. ಹೀಗೆ, ಮನುಷ್ಯನ ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಗಳನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ.