2 Corinthians 6:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದುಃಖಪಡುವವರಾಗಿದ್ದರೂ ಸೇವೆಯಲ್ಲಿ ಯಾವಾಗಲೂ ಸಂತೋಷಪಡುತ್ತೇವೆ, ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡಿದ್ದೇವೆ; ಏನೂ ಇಲ್ಲದವರಾಗಿದ್ದರೂ ಎಲ್ಲಾ ಹೊಂದಿದವರಾಗಿದ್ದೇವೆ.
Kannada BSI Bible 2016
ದುಃಖಪಡುವ ವರಾಗಿದ್ದರೂ ಯಾವಾಗಲೂ ಸಂತೋಷಪಡು ವವರೂ ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯ ವನ್ನುಂಟು ಮಾಡುವವರೂ ಏನೂ ಇಲ್ಲದವ ರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ದುಃಖಪಡುವವರಾಗಿದ್ದರೂ ಯಾವಾಗಲೂ ಸಂತೋಷಪಡುವವರೂ, ಬಡವರಾಗಿದ್ದರೂ ಅನೇಕರಿಗೆ ಐಶ್ವರ್ಯವನ್ನುಂಟುಮಾಡುವವರೂ, ಏನೂ ಇಲ್ಲದವರಾಗಿದ್ದರೂ ಎಲ್ಲಾ ಇದ್ದವರೂ ಆಗಿದ್ದೇವೆ.
Kannada Bible (KNCL) BSI 2016
ದುಃಖಪಡುತ್ತಿದ್ದರೂ ಸದಾ ಸಂತೋಷದಿಂದ ಇದ್ದೇವೆ. ದರಿದ್ರರಾಗಿದ್ದರೂ ಅನೇಕರನ್ನು ಧನವಂತರನ್ನಾಗಿಸುತ್ತಿದ್ದೇವೆ; ನಾವು ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಂತೆ ಇದ್ದೇವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದುಃಖ ಪಡುವವರಾಗಿದ್ದರೂ ಹರ್ಷಿಸುತ್ತಿದ್ದೆವು, ಬಡವರಾಗಿದ್ದಾಗಲೂ ಅನೇಕರನ್ನು ಐಶ್ವರ್ಯವಂತರನ್ನಾಗಿ ಮಾಡಿದೆವು, ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಾಗಿದ್ದೇವೆ.