2 Corinthians 7:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮ್ಮಲ್ಲಿ ಎಂಥ ಶ್ರದ್ದೆಯನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸಾಬೀತುಪಡಿಸುವುದಕ್ಕೆ ಎಂಥ ಪ್ರಯಾಸ, ಎಂಥ ರೋಷ; ಎಂಥ ಭಯ; ಎಂಥ ಹಂಬಲ; ಎಂಥ ಉತ್ಸಾಹ; ತಪ್ಪಿತಸ್ಥರನ್ನು ಶಿಕ್ಷಿಸಲು ಎಂಥ ಬಯಕೆ. ನೀವು ಆ ಕಾರ್ಯದಲ್ಲಿ ನಿರ್ದೋಷಿಗಳೆಂದು ಎಲ್ಲಾ ವಿಧದಲ್ಲಿಯೂ ತೋರಿಸಿದ್ದೀರಿ.
Kannada BSI Bible 2016
ಯಾಕಂದರೆ ದೇವರ ಚಿತ್ತಾನುಸಾರವಾದ ಈ ದುಃಖವು ನಿಮ್ಮಲ್ಲಿ ಎಂಥ ಎಚ್ಚರಿಕೆಯನ್ನೂ ಎಂಥ ನಿರ್ದೋಷತ್ವವನ್ನೂ ಎಂಥ ರೋಷವನ್ನೂ ಎಂಥ ಭಯವನ್ನೂ ಎಂಥ ಅಧಿಕವಾದ ಹಂಬಲವನ್ನೂ ಎಂಥ ಆಸಕ್ತಿಯನ್ನೂ ಎಂಥ ಪ್ರತಿಕಾರವನ್ನೂ ಹುಟ್ಟಿಸಿತೆಂದು ನೋಡಿರಿ. ಇದರಲ್ಲಿ ನೀವೆಲ್ಲಾ ನಿರ್ದೋಷಿಗಳೆಂದು ತೋರಿಸಿಕೊಂ
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮಗೆ ಎಂಥ ತಹತಹವನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸ್ಥಾಪಿಸುವದಕ್ಕೆ ಎಷ್ಟೋ ಪ್ರಯಾಸಪಟ್ಟಿರಿ, ಎಷ್ಟೋ ಮನೋವ್ಯಥೆಯನ್ನು ಅನುಭವಿಸಿದಿರಿ; ಎಂಥ ಭಯವನ್ನು ಎಂಥ ಹಂಬಲವನ್ನು ತೋರಿಸಿದಿರಿ; ಮಾನಹಾನಿಗಾಗಿ ಎಷ್ಟೋ ರೋಷಪಟ್ಟು ಶಿಕ್ಷೆಮಾಡಿದಿರಿ. ನೀವು ಆ ಕಾರ್ಯಕ್ಕೆ ಸೇರಿದವರಲ್ಲವೆಂಬದನ್ನು ಎಲ್ಲಾ ವಿಧದಲ್ಲಿಯೂ ತೋರಿಸಿದಿರಿ.
Kannada Bible (KNCL) BSI 2016
ದೇವರ ಚಿತ್ತಾನುಸಾರವಾದ ನಿಮ್ಮ ದುಃಖದಿಂದ ಎಂಥಾ ಶ್ರದ್ಧೆ ಉಂಟಾಗಿದೆ ಎಂಬುದನ್ನು ಗಮನಿಸಿನೋಡಿರಿ; ನಿಮ್ಮಲ್ಲಿ ಎಂಥ ಉತ್ಸಾಹ, ದೋಷವಿಮುಕ್ತರಾಗಲು ಎಂಥ ಪ್ರಯಾಸ, ಎಷ್ಟು ರೋಷ, ಎಷ್ಟು ಆವೇಶ, ಎಷ್ಟು ಎಚ್ಚರಿಕೆ, ಎಷ್ಟು ಹಂಬಲ, ತಪ್ಪಿತಸ್ಥರನ್ನು ಶಿಕ್ಷಿಸಲು ಎಷ್ಟು ಕಟ್ಟುನಿಟ್ಟು! ನೀವು ನಿರ್ದೋಷಿಗಳೆಂಬುದಕ್ಕೆ ಇವೆಲ್ಲವೂ ಸಾದೃಶ್ಯಗಳಾಗಿವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ.