2 Corinthians 7:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀವೆಲ್ಲರೂ ವಿಧೇಯರಾಗಿರಲು ಸಿದ್ಧರಾಗಿದ್ದನ್ನು ಜ್ಞಾಪಿಸಿಕೊಂಡಾಗಲೆಲ್ಲಾ ಅವನಿಗೆ ನಿಮ್ಮ ಮೇಲೆ ಪ್ರೀತಿಯು ಹೆಚ್ಚಾಗುತ್ತದೆ. ನೀವು ಅವನನ್ನು ಗೌರವದಿಂದಲೂ ಭಯದಿಂದಲೂ ಸ್ವೀಕರಿಸಿದಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ವಿಧೇಯತೆಯಲ್ಲಿ ಭಯಭಕ್ತಿಯಿಂದ ಅವನನ್ನು ಸ್ವೀಕರಿಸಿಕೊಂಡಿದ್ದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನಿಗಿರುವ ಪ್ರೀತಿ ಹೆಚ್ಚಾಗಿದೆ.
Kannada BSI Bible 2016
ನೀವು ಭಯದಿಂದ ನಡಗುವವರಾಗಿ ಅವನನ್ನು ಸೇರಿಸಿ ಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯನ್ನು ಅವನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಮಮತೆಯು ಹೆಚ್ಚಾಗುವದು.ಸರ್ವವಿಷಯದಲ್ಲೂ ನಿಮ್ಮನ್ನು ಕುರಿತು ನನಗೆ ಭರವಸವಿರುವದರಿಂದ ಸಂತೋಷಪಡುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಮನೋಭೀತಿಯಿಂದ ನಡುಗುವವರಾಗಿ ಅವನನ್ನು ಸೇರಿಸಿಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯು ತೋರಬಂತು. ಅವನು ಅದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಕನಿಕರವು ಹೆಚ್ಚಾಗಿದೆ.
Kannada Bible (KNCL) BSI 2016
ನಿಮ್ಮೆಲ್ಲರ ವಿನಯ-ವಿಧೇಯತೆಯನ್ನು, ಭಯಭಕ್ತಿಯಿಂದ ನೀವು ನೀಡಿದ ಸ್ವಾಗತವನ್ನು ಸ್ಮರಿಸಿಕೊಳ್ಳುವಾಗಲೆಲ್ಲ ನಿಮ್ಮ ಮೇಲೆ ಆತನಿಗಿರುವ ಪ್ರೀತಿ ಉಕ್ಕಿ ಹರಿಯುತ್ತದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ತೀತನ ಮಾತುಗಳಿಗೆ ವಿಧೇಯರಾಗಿದ್ದುದ್ದನ್ನೂ ಅವನನ್ನು ಭಯಭಕ್ತಿಯಿಂದಲೂ ನಡುಗುವಿಕೆಯಿಂದಲೂ ಸ್ವೀಕರಿಸಿದ್ದನ್ನೂ, ಅವನು ಜ್ಞಾಪಕಕ್ಕೆ ತಂದುಕೊಂಡಾಗ, ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುವವನಾಗಿದ್ದಾನೆ.