2 Corinthians 7:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ನಿಮಗೆ ಬರೆದ ಪತ್ರವು ನಿಮಗೆ ದುಃಖವನ್ನು ಉಂಟುಮಾಡಿದ್ದರೂ, ಅದನ್ನು ಬರೆದದ್ದಕ್ಕೆ ನನಗೆ ದುಃಖವಿಲ್ಲ, ಆ ಪತ್ರವು ನಿಮಗೆ ದುಃಖವನ್ನು ಉಂಟು ಮಾಡಿತೆಂದು ನನಗೆಗೊತ್ತಿದೆ. ಆ ವಿಷಯದಲ್ಲಿ ನನಗೆ ವ್ಯಸನವಾಯಿತು. ಆದರೆ ಅದು ನಿಮ್ಮನ್ನು ಸ್ವಲ್ಪಕಾಲದವರೆಗೆ ಮಾತ್ರ ದುಃಖಿತರನ್ನಾಗಿ ಮಾಡಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಬರೆದ ಪತ್ರದಿಂದ ನಿಮಗೆ ದುಃಖವಾಗಿದ್ದರೂ ನನಗೆ ವಿಷಾದವಿಲ್ಲ, ಅದು ನಿಮ್ಮನ್ನು ಸ್ವಲ್ಪ ಸಮಯ ದುಃಖಪಡಿಸಿತೆಂದು ನಾನು ಮೊದಲು ಪಶ್ಚಾತ್ತಾಪ ಪಟ್ಟಿದ್ದರೂ ಈಗ ಸಂತೋಷಪಡುತ್ತೇನೆ.
Kannada BSI Bible 2016
ನಾನು ಪತ್ರದಿಂದ ನಿಮ್ಮನ್ನು ದುಃಖಪಡಿಸಿದಕ್ಕೆ ನನಗೆ ವ್ಯಸನವಾದರೂ ನಾನು ಪಶ್ಚಾತ್ತಾಪಪಡು ವದಿಲ್ಲ, ಯಾಕಂದರೆ ಆ ಪತ್ರಿಕೆಯು ನಿಮ್ಮನ್ನು ದುಃಖ ಪಡಿಸಿದಾಗ್ಯೂ ಅದು ಸ್ವಲ್ಪ ಕಾಲಕ್ಕೆ ಎಂದು ನಾನು ತಿಳಿಯುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಬರೆದ ಪತ್ರಿಕೆಯು ನಿಮ್ಮನ್ನು ದುಃಖಪಡಿಸಿದ್ದರೂ ನನಗೆ ಪಶ್ಚಾತ್ತಾಪವಿಲ್ಲ. ಅದು ನಿಮ್ಮನ್ನು ಒಂದು ಗಳಿಗೆ ಹೊತ್ತಾದರೂ ದುಃಖಪಡಿಸಿತೆಂದು ನಾನು ಮೊದಲು ಪಶ್ಚಾತ್ತಾಪಪಡುತ್ತಿದ್ದರೂ ಈಗ ಸಂತೋಷಪಡುತ್ತೇನೆ.
Kannada Bible (KNCL) BSI 2016
ನಾನು ಬರೆದ ಪತ್ರದಿಂದ ನಿಮ್ಮ ಮನಸ್ಸಿಗೆ ನೋವಾಗಿರಬಹುದು. ಆದರೂ ಚಿಂತೆಯಿಲ್ಲ. ಆ ಪತ್ರವು ನಿಮ್ಮನ್ನು ಸ್ವಲ್ಪಕಾಲ ದುಃಖಕ್ಕೀಡುಮಾಡಿತೆಂದು ನಾನು ಮೊದಮೊದಲು ನೊಂದುಕೊಂಡೆನಾದರೂ ಈಗ ಸಂತೋಷಪಡುತ್ತೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಬರೆದಿದ್ದ ಪತ್ರದಿಂದ ನಿಮಗೆ ದುಃಖವಾಗಿದ್ದಲ್ಲಿ, ನಾನು ಅದಕ್ಕೆ ಬೇಸರಪಡುವುದಿಲ್ಲ. ನನ್ನ ಪತ್ರದಿಂದ ನಿಮಗೆ ದುಃಖವಾಯಿತಲ್ಲಾ ಎಂದು ಸ್ವಲ್ಪಕಾಲ ನಾನು ನೊಂದುಕೊಂಡಿದ್ದರೂ,