2 Corinthians 9:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇದಲ್ಲದೆ ಆ ಜನರು ಪ್ರಾರ್ಥಿಸುವಾಗ ತಾವು ನಿಮ್ಮೊಂದಿಗೆ ಇರಬೇಕಾಗಿತ್ತೆಂದು ಆಶಿಸುವರು. ದೇವರ ಅತಿಶಯವಾದ ಕೃಪೆಯು ನಿಮ್ಮಲ್ಲಿರುವುದೇ ಅದಕ್ಕೆ ಕಾರಣ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ ನಿಮಗೋಸ್ಕರ ವಿಜ್ಞಾಪನೆ ಮಾಡಿ ದೇವರ ಅತಿಶಯವಾದ ಕೃಪೆಯು ನಿಮಗೆ ದೊರೆತಿರುವುದರಿಂದ ಅವರು ನಿಮ್ಮನ್ನು ನೋಡಲು ಬಯಸಿರುವರಲ್ಲದೆ ನಿಮಗಾಗಿ ಪ್ರಾರ್ಥಿಸುವರು.
Kannada BSI Bible 2016
ಇದಲ್ಲದೆ ನಿಮ್ಮಲ್ಲಿ ರುವ ದೇವರ ಅಪಾರವಾದ ಕೃಪೆಯ ನಿಮಿತ್ತ ಅವರು ಪ್ರಾರ್ಥನೆ ಮಾಡುವವರಾಗಿ ನಿಮಗೋಸ್ಕರ ಹಂಬಲಿ ಸುತ್ತಾರೆ.ವರ್ಣಿಸಲಶಕ್ಯವಾದ ದೇವರದಾನಕ್ಕಾಗಿ ಆತನಿಗೆ ಸ್ತೋತ್ರವಾಗಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ನಿಮಗೋಸ್ಕರ ವಿಜ್ಞಾಪನೆಮಾಡಿ ದೇವರ ಅತಿಶಯವಾದ ಕೃಪೆಯು ನಿಮ್ಮಲ್ಲಿ ಇರುವದರಿಂದ ನಿಮ್ಮ ಪರಿಚಿತಿಮಾಡಬೇಕೆಂದು ಕೋರುವರು.
Kannada Bible (KNCL) BSI 2016
ದೇವರು ನಿಮಗೆ ಅನುಗ್ರಹಿಸಿರುವ ಅತಿಶಯವಾದ ವರಕ್ಕಾಗಿ ಅವರು ಪ್ರೀತಿವಾತ್ಸಲ್ಯದಿಂದ ನಿಮಗೋಸ್ಕರ ಪ್ರಾರ್ಥಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮಗೆ ದೊರೆತ ಮಿತಿಯಿಲ್ಲದ ದೇವರ ಕೃಪೆಯ ನಿಮಿತ್ತ, ಅವರು ನಿಮ್ಮನ್ನು ಕಾಣುವ ಬಯಕೆಯಿಂದ ನಿಮಗಾಗಿ ಪ್ರಾರ್ಥಿಸುವರು.