2 Kings 10:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಯೇಹುವು ತನ್ನ ಜನರಿಗೆ, “ಅವರನ್ನು ಜೀವಸಹಿತ ಹಿಡಿದು ತನ್ನಿ!” ಎಂದು ಹೇಳಿದನು. ಯೇಹುವಿನ ಜನರು ಅಹಜ್ಯನ ಬಂಧುಗಳನ್ನು ಜೀವಸಹಿತ ಹಿಡಿದು ತಂದರು. ಅಲ್ಲಿ ನಲವತ್ತೆರಡು ಮಂದಿ ಜನರಿದ್ದರು. ಯೇಹು ಬೆತ್‌ಎಕೇಡ್‌ನ ಬಾವಿಯ ಹತ್ತಿರ ಅವರನ್ನು ಕೊಂದುಹಾಕಿದನು. ಯೇಹುವು ಯಾರನ್ನೂ ಜೀವಸಹಿತ ಉಳಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಯೇಹುವು ತನ್ನ ಸೇವಕರಿಗೆ, “ಅವರನ್ನು ಜೀವಸಹಿತ ಹಿಡಿಯಿರಿ” ಎಂದು ಆಜ್ಞಾಪಿಸಿದನು. ಅವರು ಅವರನ್ನು ಹಿಡಿದು ಕೊಂದು, ಉಣ್ಣೆ ಕತ್ತರಿಸುವ ಮನೆಯ ಬಾವಿಯಲ್ಲಿ ಹಾಕಿಬಿಟ್ಟರು. ಅವರು ನಲ್ವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನೂ ತಪ್ಪಿಸಿಕೊಳ್ಳಲು ಬಿಡಲಿಲ್ಲ.
Kannada BSI Bible 2016
ಆಗ ಅವನು ಅವರನ್ನು ಜೀವದಿಂದ ಹಿಡಿಯಿರಿ ಎಂದು ಅವನು ಹೇಳಿದ್ದರಿಂದ ಅವರು ಇವರನ್ನು ಜೀವದಿಂದ ಹಿಡಿದು ಉಣ್ಣೆ ಕತ್ತರಿಸುವ ಮನೆಯ ಕುಣಿಯ ಬಳಿಯಲ್ಲಿ ಕೊಂದುಹಾಕಿದರು. ಅವರು ನಲವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನೂ ಉಳಿಸಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಯೇಹುವು ತನ್ನ ಸೇವಕರಿಗೆ - ಅವರನ್ನು ಸಜೀವಿಗಳಾಗಿ ಹಿಡಿಯಿರಿ ಎಂದು ಆಜ್ಞಾಪಿಸಿದನು. ಅವರು ಅವರನ್ನು ಹಿಡಿದು ವಧಿಸಿ ಆ ಛತ್ರದ ಬಾವಿಯಲ್ಲಿ ಹಾಕಿದರು. ಅವರು ನಾಲ್ವತ್ತೆರಡು ಮಂದಿಯಿದ್ದರು; ಅವರಲ್ಲಿ ಒಬ್ಬನನ್ನೂ ಬಿಡಲಿಲ್ಲ.
Kannada Bible (KNCL) BSI 2016
ಆಗ ಯೇಹುವು ತನ್ನ ಸೇವಕರಿಗೆ, “ಅವರನ್ನು ಸಜೀವಿಗಳಾಗಿ ಹಿಡಿಯಿರಿ,” ಎಂದು ಆಜ್ಞಾಪಿಸಿದನು. ಅವರು ಅವರನ್ನು ಹಿಡಿದು ವಧಿಸಿ ಆ ಛತ್ರದ ಬಾವಿಯಲ್ಲಿ ಹಾಕಿದರು. ಅವರು ನಾಲ್ವತ್ತೆರಡು ಮಂದಿಯಿದ್ದರು; ಅವರಲ್ಲಿ ಒಬ್ಬನನ್ನೂ ಬಿಡಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು, “ಅವರನ್ನು ಜೀವದಿಂದ ಹಿಡಿಯಿರಿ,” ಎಂದು ಹೇಳಿದ್ದರಿಂದ ಕುರುಬರು ಇವರನ್ನು ಜೀವದಿಂದ ಹಿಡಿದು, ಉಣ್ಣೆ ಕತ್ತರಿಸುವ ಮನೆಯ ಬಾವಿಯ ಬಳಿಯಲ್ಲಿ ಕೊಂದುಹಾಕಿದರು. ಅವರು ನಲವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನಾದರೂ ಉಳಿಸಲಿಲ್ಲ.