2 Kings 10:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೇಹು ಸಮಾರ್ಯಕ್ಕೆ ಬಂದು, ಅಹಾಬನ ಕುಟುಂಬದಲ್ಲಿ ಜೀವಸಹಿತರಾಗಿ ಸಮಾರ್ಯದಲ್ಲಿ ಉಳಿದಿದ್ದವರನ್ನೆಲ್ಲಾ ಕೊಂದುಹಾಕಿದನು. ಯೆಹೋವನು ಎಲೀಯನಿಗೆ ಹೇಳಿದ್ದಂತೆಯೇ ಯೇಹು ಮಾಡಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸಮಾರ್ಯವನ್ನು ಸೇರಿದ ನಂತರ ಅಲ್ಲಿ ಉಳಿದಿದ್ದ ಅಹಾಬನ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟನು. ಹೀಗೆ ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿಸಿದ ಮಾತು ನೆರವೇರಿತು.
Kannada BSI Bible 2016
ಅವನು ಸಮಾರ್ಯಕ್ಕೆ ಬಂದ ತರುವಾಯ ಸಮಾ ರ್ಯದಲ್ಲಿ ಕರ್ತನು ಎಲೀಯನಿಗೆ ಹೇಳಿದ ವಾಕ್ಯದ ಪ್ರಕಾರ ಅವನನ್ನು ನಾಶಮಾಡುವ ಪರ್ಯಂತರ ಅಹಾಬನಿಗೆ ಉಳಿದವರೆಲ್ಲರನ್ನು ಸಂಹರಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸಮಾರ್ಯವನ್ನು ಸೇರಿದನಂತರ ಅಲ್ಲಿ ಉಳಿದಿದ್ದ ಅಹಾಬನ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟನು. ಹೀಗೆ ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿಸಿದ ಮಾತು ನೆರವೇರಿತು.
Kannada Bible (KNCL) BSI 2016
ಸಮಾರಿಯವನ್ನು ಸೇರಿದ ನಂತರ ಅಲ್ಲಿ ಉಳಿದಿದ್ದ ಅಹಾಬನ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟನು. ಹೀಗೆ ಎಲೀಯನ ಮುಖಾಂತರ ಸರ್ವೇಶ್ವರ ಹೇಳಿಸಿದ ಮಾತು ನೆರವೇರಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೇಹುವು ಸಮಾರ್ಯಕ್ಕೆ ಬಂದ ತರುವಾಯ ಸಮಾರ್ಯದಲ್ಲಿ ಅಹಾಬನಿಗೆ ಉಳಿದವರೆಲ್ಲರನ್ನು ಎಲೀಯನಿಗೆ ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರ ಅವರನ್ನು ಸಂಹರಿಸಿದನು.