2 Kings 10:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೇಹು ನಿಲುವಂಗಿಗಳ ಮೇಲ್ವಿಚಾರಕನಿಗೆ, “ಬಾಳನ ಭಕ್ತರಿಗೆಲ್ಲ ನಿಲುವಂಗಿಗಳನ್ನು ತಂದುಕೊಡು” ಎಂದು ಹೇಳಿದನು. ಅವನು ಬಾಳನ ಭಕ್ತರಿಗೆ ನಿಲುವಂಗಿಗಳನ್ನು ತಂದುಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೇಹುವು ವಸ್ತ್ರಗಾರದ ಅಧಿಪತಿಗೆ, “ಬಾಳ್ ದೇವತೆಯನ್ನು ಸೇವಿಸುವ ಭಕ್ತರೆಲ್ಲರಿಗೂ ಬಟ್ಟೆಗಳನ್ನು ಕೊಡು” ಎಂದು ಆಜ್ಞಾಪಿಸಿಲು ಅವನು ತಂದುಕೊಟ್ಟನು.
Kannada BSI Bible 2016
ಆಗ ಅವನು ವಸ್ತ್ರಗಳ ಮನೆಯ ಮೇಲೆ ಇರುವವನಿಗೆ ಬಾಳನನ್ನು ಸೇವಿಸುವ ಎಲ್ಲರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಾ ಎಂದು ಹೇಳಿದ್ದರಿಂದ ಅವನು ಅವರಿಗೋಸ್ಕರ ವಸ್ತ್ರಗಳನ್ನು ತಕ್ಕೊಂಡು ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೇಹುವು ವಸ್ತ್ರಾಗಾರದ ಅಧಿಪತಿಗೆ - ಬಾಳನ ಭಕ್ತರೆಲ್ಲರಿಗೂ ಬಟ್ಟೆಗಳನ್ನು ಕೊಡು ಎಂದು ಆಜ್ಞಾಪಿಸಲು ಅವನು ತಂದುಕೊಟ್ಟನು.
Kannada Bible (KNCL) BSI 2016
ಯೇಹುವು ವಸ್ತ್ರಾಗಾರದ ಅಧಿಪತಿಗೆ, “ಬಾಳ್ ದೇವತೆಯ ಭಕ್ತರೆಲ್ಲರಿಗೂ ಪೂಜಾವಸ್ತ್ರಗಳನ್ನು ಕೊಡು,” ಎಂದು ಆಜ್ಞಾಪಿಸಲು ಅವನು ತಂದುಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವನು ವಸ್ತ್ರಗಳ ಮನೆಯ ಮೇಲಧಿಕಾರಿಗೆ, “ಬಾಳನನ್ನು ಸೇವಿಸುವ ಸಮಸ್ತರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಾ,” ಎಂದು ಹೇಳಿದ್ದರಿಂದ, ಅವನು ಅವರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಂದನು.