2 Kings 10:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹಜಾಯೇಲನು ಜೋರ್ಡನ್ ನದಿಯ ಪೂರ್ವಕ್ಕಿರುವ ಪ್ರದೇಶವನ್ನೆಲ್ಲ ಗೆದ್ದುಕೊಂಡನು. ಅವನು ಗಾದ್, ರೂಬೇನ್ ಮತ್ತು ಮನಸ್ಸೆ ಕುಲಗಳಿಗೆ ಸೇರಿದ ಎಲ್ಲಾ ಪ್ರದೇಶವನ್ನು, ಗಿಲ್ಯಾದ್‌ನ ಎಲ್ಲಾ ಪ್ರದೇಶವನ್ನು ಗೆದ್ದನು. ಹಜಾಯೇಲನು ಆರ್ನೋನ್ ಕಣಿವೆಯಿಂದ ಗಿಲ್ಯಾದ್, ಬಾಷಾನ್‌ವರೆಗಿನ ಅರೋಯೇರ್ ಪ್ರದೇಶವನ್ನೆಲ್ಲ ಗೆದ್ದುಕೊಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೊರ್ದನ್ ನದಿಯ ಪೂರ್ವದಿಕ್ಕಿಗೂ, ಅರ್ನೋನ್ ತಗ್ಗಿನ ಅರೋಯೇರ್ ಪಟ್ಟಣದ ಉತ್ತರದಿಕ್ಕಿಗೂ ಇರುವ ಗಿಲ್ಯಾದ್, ಬಾಷಾನ್ ಪ್ರಾಂತ್ಯಗಳಲ್ಲಿ ವಾಸವಾಗಿದ್ದ ಗಾದ್, ರೂಬೇನ್ ಮತ್ತು ಮನಸ್ಸೆ ಕುಲಗಳವರನ್ನೂ, ಬೇರೆ ಎಲ್ಲಾ ಪ್ರಾಂತ್ಯಗಳಲ್ಲಿರುವ ಇಸ್ರಾಯೇಲರನ್ನೂ ಬಾಧಿಸಿದನು.
Kannada BSI Bible 2016
ಮೂಡಣದಲ್ಲಿ ಯೊರ್ದನ್‌ ಮೊದಲುಗೊಂಡು ಗಾದ್ಯರೂ ರೂಬೆನ್ಯರೂ ವಾಸ ವಾಗಿದ್ದ ಗಿಲ್ಯಾದಿನ ಎಲ್ಲಾ ದೇಶವನ್ನೂ ಅರ್ನೋನ್‌ ನದಿಯ ಬಳಿಯಲ್ಲಿರುವ ಅರೋಯೇರ್‌ ಮೊದಲು ಗೊಂಡು ಮನಸ್ಸೆಯವರು ನಿವಾಸವಾಗಿದ್ದ ಗಿಲ್ಯಾದ್‌ ಬಾಶಾನ್‌ ಸಂಹರಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅರ್ನೊನ್‍ತಗ್ಗಿನ ಅರೋಯೇರ್ ಪಟ್ಟಣದ ಉತ್ತರದಿಕ್ಕಿಗೂ ಇರುವ ಗಿಲ್ಯಾದ್ ಬಾಷಾನ್ ಪ್ರಾಂತಗಳಲ್ಲಿ ವಾಸವಾಗಿದ್ದ ಗಾದ್ ರೂಬೇನ್ ಮನಸ್ಸೆ ಕುಲಗಳವರನ್ನೂ ಬೇರೆ ಎಲ್ಲಾ ಪ್ರಾಂತಗಳಲ್ಲಿರುವ ಇಸ್ರಾಯೇಲ್ಯರನ್ನೂ ಬಾಧಿಸಿದನು.
Kannada Bible (KNCL) BSI 2016
ಹಜಾಯೇಲನು ಬಂದು ಜೋರ್ಡನಿನ ಪೂರ್ವದಿಕ್ಕಿಗೂ, ಅರ್ನೋನ್ ತಗ್ಗಿನ ಅರೋಯೇರ್ ಪಟ್ಟಣದ ಉತ್ತರದಿಕ್ಕಿಗೂ, ಇರುವ ಗಿಲ್ಯಾದ್, ಬಾಷಾನ್, ಪ್ರಾಂತ್ಯಗಳಲ್ಲಿ ವಾಸವಾಗಿದ್ದ ಗಾದ್, ರೂಬೇನ್, ಮನಸ್ಸೆ ಕುಲಗಳವನ್ನೂ ಬೇರೆ ಎಲ್ಲಾ ಪ್ರಾಂತ್ಯಗಳಲ್ಲಿರುವ ಇಸ್ರಯೇಲರನ್ನೂ ಹಿಂಸಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೂರ್ವದಲ್ಲಿ ಯೊರ್ದನ್ ಮೊದಲುಗೊಂಡು ಗಾದ್ಯರೂ, ರೂಬೇನ್ಯರೂ ನಿವಾಸವಾಗಿದ್ದ ಗಿಲ್ಯಾದಿನ ಸಮಸ್ತ ದೇಶವನ್ನೂ, ಅರ್ನೋನ್ ನದಿಯ ಬಳಿಯಲ್ಲಿರುವ ಅರೋಯೇರ್ ಮೊದಲುಗೊಂಡು ಮನಸ್ಸೆಯವರು ನಿವಾಸವಾಗಿದ್ದ ಗಿಲ್ಯಾದ್ ಬಾಷಾನಿನಲ್ಲಿರುವವರನ್ನೂ ಹಜಾಯೇಲನು ಸಂಹರಿಸಿದನು.