2 Kings 10:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಹಾಬನ ಮನೆಯನ್ನು ನೋಡಿಕೊಳ್ಳುವ ಗೃಹಾಧಿಕಾರಿ, ನಗರವನ್ನು ನಿಯಂತ್ರಿಸುವ ನಗರಾಧಿಕಾರಿ, ಹಿರಿಯರು ಮತ್ತು ಅಹಾಬನ ಮಕ್ಕಳ ಪಾಲಕರಾದ ಜನರೆಲ್ಲರೂ ಯೇಹುವಿಗೆ ಈ ಸಂದೇಶವನ್ನು ಕಳುಹಿಸಿದರು: “ನಾವು ನಿನ್ನ ಸೇವಕರು. ನೀನು ನಮಗೆ ಹೇಳುವುದನ್ನೆಲ್ಲಾ ನಾವು ಮಾಡುತ್ತೇವೆ. ನಾವು ಯಾರನ್ನೂ ರಾಜನನ್ನಾಗಿ ಮಾಡುವುದಿಲ್ಲ. ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ರಾಜಗೃಹಾಧಿಪತಿ, ಪಟ್ಟಣದ ಪುರಾಧಿಕಾರಿ, ಹಿರಿಯರು, ರಾಜಪುತ್ರಪಾಲಕರು ಇವರೆಲ್ಲ ಸೇರಿ ಯೇಹುವಿಗೆ, “ನಾವು ನಿನ್ನ ಆಜ್ಞಾಪಾಲರಕರಾದ ಸೇವಕರು. ನಾವಾಗಿ ನಮಗೊಬ್ಬ ಅರಸನನ್ನು ನೇಮಿಸಿಕೊಳ್ಳುವುದಿಲ್ಲ, ನಿನ್ನ ಚಿತ್ತವೇ ನೆರವೇರಲಿ” ಎಂದು ಹೇಳಿ ಕಳುಹಿಸಿದರು.
Kannada BSI Bible 2016
ಆಗ ಮನೆಯ ಮೇಲೆ ಇರುವವನೂ ಪಟ್ಟಣದ ಮೇಲೆ ಇರುವವನೂ ಹಿರಿಯರೂ ಮಕ್ಕಳನ್ನು ಪೋಷಿಸುವವರೂ ಯೇಹು ವಿಗೆ--ನಾವು ನಿನ್ನ ಸೇವಕರು; ನೀನು ನಮಗೆ ಹೇಳುವ ದನ್ನೆಲ್ಲಾ ಮಾಡುತ್ತೇವೆ; ನಾವು ಯಾವನನ್ನಾದರೂ ಅರಸನಾಗಲು ಮಾಡುವದಿಲ್ಲ; ನಿನ್ನ ದೃಷ್ಟಿಗೆ ಒಳ್ಳೇದಾಗಿ ರುವದನ್ನು ಮಾಡು ಎಂದು ಹೇಳಿ ಕಳುಹಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ರಾಜಗೃಹಾಧಿಪತಿ, ಪುರಾಧಿಕಾರಿ, ಹಿರಿಯರು, ರಾಜಪುತ್ರಪಾಲಕರು ಇವರೆಲ್ಲಾ ಕೂಡಿ ಯೇಹುವಿಗೆ - ನಾವು ನಿನ್ನ ಆಜ್ಞಾಧಾರಕರಾದ ಸೇವಕರು; ನಾವಾಗಿ ನಮಗೊಬ್ಬ ಅರಸನನ್ನು ನೇವಿುಸಿಕೊಳ್ಳುವದಿಲ್ಲ; ನಿನ್ನ ಚಿತ್ತವೇ ನೆರವೇರಲಿ ಎಂದು ಹೇಳಿಕಳುಹಿಸಿದರು.
Kannada Bible (KNCL) BSI 2016
ಅನಂತರ ರಾಜಗೃಹಾಧಿಪತಿ, ಪುರಾಧಿಕಾರಿ, ಹಿರಿಯರು, ರಾಜಪುತ್ರಪಾಲಕರು ಇವರು ಎಲ್ಲರು ಕೂಡಿ ಯೇಹುವಿಗೆ, “ನಾವು ನಿಮ್ಮ ಆಜ್ಞಾಧಾರಕರಾದ ಸೇವಕರು, ನಾವಾಗಿ ನಮಗೊಬ್ಬ ಅರಸನನ್ನು ನೇಮಿಸಿಕೊಳ್ಳುವುದಿಲ್ಲ; ನಿಮ್ಮ ಚಿತ್ತವೇ ನೆರವೇರಲಿ,” ಎಂದು ಹೇಳಿಕಳುಹಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಮನೆಯ ಆಡಳಿತಾಧಿಕಾರಿ, ಪಟ್ಟಣದ ರಾಜ್ಯಪಾಲರು, ಹಿರಿಯರು ಮತ್ತು ಪಾಲಕರು ಈ ಸಂದೇಶವನ್ನು ಯೇಹುವಿನ ಬಳಿಗೆ ಕಳುಹಿಸಿ, “ನಾವು ನಿಮ್ಮ ಸೇವಕರು ನೀವು ನಮಗೆ ಹೇಳುವುದನ್ನೆಲ್ಲಾ ಮಾಡುತ್ತೇವೆ. ನಾವು ಯಾರನ್ನೂ ಅರಸನನ್ನಾಗಿ ನೇಮಿಸುವುದಿಲ್ಲ. ನಿಮ್ಮ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ನೀವು ಮಾಡಿರಿ,” ಎಂದರು.