2 Kings 11:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಸಂಗತಿಗಳಿಗೆಲ್ಲ ಸೇನಾಧಿಪತಿಗಳು ವಿಧೇಯರಾಗಿದ್ದರು. ಪ್ರತಿಯೊಬ್ಬ ಸೇನಾಧಿಪತಿಯೂ ತನ್ನ ಕಾವಲುಗಾರರನ್ನು ಅಂದರೆ ಸಬ್ಬತ್‌ದಿನದಂದು ಕಾಯಲು ಬರಬೇಕಾಗಿದ್ದ ಮತ್ತು ಸಬ್ಬತ್‌ದಿನದಂದು ಕೆಲಸದಿಂದ ಹೋಗಬೇಕಾಗಿದ್ದ ಸಿಪಾಯಿಗಳನ್ನು ಕರೆದೊಯ್ದನು. ಅವರೆಲ್ಲರೂ ಯಾಜಕನಾದ ಯೆಹೋಯಾದಾವನ ಹತ್ತಿರಕ್ಕೆ ಹೋದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಜಕನಾದ ಯೆಹೋಯಾದಾಮನು ಆಜ್ಞಾಪಿಸಿದಂತೆ, ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ರಾಜಪುತ್ರನ ಬಳಿಗೆ ಬಂದರು.
Kannada BSI Bible 2016
ಹಾಗೆಯೇ ನೂರಕ್ಕೆ ಅಧಿಪತಿಯಾದವರು ಯಾಜಕನಾದ ಯೆಹೋಯಾದಾ ವನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್ ದಿವಸದಲ್ಲಿ ಪ್ರವೇಶಿಸಬೇಕಾದ ತನ್ನ ಜನರನ್ನೂ ಸಬ್ಬತ್ ದಿವಸದಲ್ಲಿ ಹೊರಗೆ ಹೋಗಲು ಬೇಕಾದವರನ್ನೂ ಯಾಜಕನಾದ ಯೆಹೋ ಯಾದಾವನ ಬಳಿಗೆ ಕರಕೊಂಡು ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್‍ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರಕೊಂಡು ಅವನ ಬಳಿಗೆ ಬಂದರು.
Kannada Bible (KNCL) BSI 2016
ಯಾಜಕನಾದ ಯೆಹೋಯಾದವನು ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ಅವನ ಬಳಿಗೆ ಬಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಶತಾಧಿಪತಿಗಳು ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಯೆಹೋಯಾದಾವನ ಬಳಿಗೆ ಕರೆದುಕೊಂಡು ಬಂದರು.