2 Kings 12:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜನರು ದೇವಾಲಯಕ್ಕೆ ಹೋದಾಗ ಆ ಪೆಟ್ಟಿಗೆಯಲ್ಲಿ ಹಣವನ್ನು ಹಾಕಲಾರಂಭಿಸಿದರು. ರಾಜನ ಕಾರ್ಯದರ್ಶಿಯಾಗಲಿ ಪ್ರಧಾನಯಾಜಕನಾಗಲಿ ನೋಡಿದಾಗ ಸಾಕಷ್ಟು ಹಣವು ತುಂಬಿದ್ದರೆ ಅದನ್ನು ಲೆಕ್ಕಹಾಕಿ ಚೀಲಗಳಲ್ಲಿ ತುಂಬಿಡುತ್ತಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಆಲಯದ ಪೆಟ್ಟಿಗೆಯಲ್ಲಿ ಬೇಕಾದಷ್ಟು ಹಣ ಇದೆಯೆಂದು ಕಂಡು ಬಂದಾಗೆಲ್ಲಾ, ರಾಜಲೇಖಕನೂ, ಮಹಾಯಾಜಕನೂ ಬಂದು ಅದನ್ನು ಎಣಿಸಿ ಚೀಲಗಳಲ್ಲಿ ಕಟ್ಟಿ ಇಡುವರು.
Kannada BSI Bible 2016
ಪೆಟ್ಟಿಗೆ ಯಲ್ಲಿ ಬಹಳ ಹಣ ಉಂಟೆಂದು ಅವರು ನೋಡಿ ಅರಸನ ಲೇಖಕನೂ ಪ್ರಧಾನಯಾಜಕನೂ ಂದು ಕರ್ತನ ಮನೆಯಲ್ಲಿ ಸಿಕ್ಕಿದ ಹಣವನ್ನು ಎಣಿಸಿ ಚೀಲದಲ್ಲಿ ಹಾಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪೆಟ್ಟಿಗೆಯಲ್ಲಿ ತಕ್ಕಷ್ಟು ಹಣಕೂಡಿದೆಯೆಂದು ಕಂಡು ಬಂದಾಗೆಲ್ಲಾ ರಾಜಲೇಖಕನೂ ಮಹಾಯಾಜಕನೂ ಬಂದು ಅದನ್ನು ಚೀಲಗಳಲ್ಲಿ ಹಾಕಿ ತೂಕಮಾಡಿ ಯೆಹೋವನ ಆಲಯದ ಹಣವು ಇಷ್ಟಿಷ್ಟು ಆಯಿತೆಂದು ಬರೆದುಕೊಂಡು
Kannada Bible (KNCL) BSI 2016
ಪೆಟ್ಟಿಗೆಯಲ್ಲಿ ತಕ್ಕಷ್ಟು ಹಣಕೂಡಿದೆಯೆಂದು ಕಂಡುಬಂದಾಗೆಲ್ಲಾ, ರಾಜಲೇಖಕನು ಹಾಗು ಮಹಾಯಾಜಕನು ಬಂದು ಅದನ್ನು ಚೀಲಗಳಲ್ಲಿ ಹಾಕಿ, ತೂಕಮಾಡಿ, ಸರ್ವೇಶ್ವರನ ಆಲಯದ ಹಣವು ಇಷ್ಟಿಷ್ಟು ಆಯಿತೆಂದು ಬರೆದುಕೊಂಡು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೆಟ್ಟಿಗೆಯಲ್ಲಿ ಬಹಳ ಹಣ ಉಂಟೆಂದು ಅವರು ಕಂಡಾಗಲೆಲ್ಲಾ ಅರಸನ ಲೇಖಕನೂ, ಮಹಾಯಾಜಕನೂ ಬಂದು, ಯೆಹೋವ ದೇವರ ಆಲಯದಲ್ಲಿ ತಂದಿದ್ದ ಹಣವನ್ನು ಎಣಿಸಿ, ಚೀಲಗಳಲ್ಲಿ ಹಾಕಿದರು.