2 Kings 12:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜನರು ತಮ್ಮ ಅಪರಾಧ ಪ್ರಾಯಶ್ಚಿತ್ತ ಮತ್ತು ದೋಷಪರಿಹಾರದ ಸಮಯದಲ್ಲಿ ಹಣವನ್ನು ಕೊಟ್ಟರು. ಆದರೆ ಅಂತಹ ಹಣವನ್ನು ಕೆಲಸಗಾರರ ವೇತನಕ್ಕೆ ಉಪಯೋಗಿಸಲಿಲ್ಲ. ಆ ಹಣವು ಯಾಜಕರಿಗೆ ಸೇರಿದ್ದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಪರಾಧ ಪ್ರಾಯಶ್ಚಿತ್ತಕ್ಕಾಗಿಯೂ, ದೋಷಪರಿಹಾರಕ್ಕಾಗಿಯೂ ತರಲ್ಪಟ್ಟ ಹಣವು ಯಾಜಕರ ಪಾಲಿಗೆ ಸೇರುತ್ತಿತ್ತು. ಅದು ಯೆಹೋವನ ಆಲಯಕ್ಕೆ ಸೇರುತ್ತಿರಲಿಲ್ಲ.
Kannada BSI Bible 2016
ಅವರು ನಂಬಿಗಸ್ತರಾಗಿ ಮಾಡಿದರು. ಆದರೆ ಅಪರಾಧದ ಹಣವನ್ನೂ ಪಾಪಪರಿಹಾರದ ಹಣವನ್ನೂ ಕರ್ತನ ಮನೆಗೆ ತಕ್ಕೊಂಡು ಬರಲಿಲ್ಲ; ಅದು ಯಾಜಕರದಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಪರಾಧ ಪ್ರಾಯಶ್ಚಿತ್ತಕ್ಕಾಗಿಯೂ ದೋಷಪರಿಹಾರಕ್ಕಾಗಿಯೂ ತರಲ್ಪಟ್ಟ ಹಣವು ಯಾಜಕರ ಭಾಗವಾಗಿತ್ತು; ಅದು ಯೆಹೋವನ ಆಲಯಕ್ಕೆ ಸೇರಲಿಲ್ಲ.
Kannada Bible (KNCL) BSI 2016
ಅಪರಾಧಪ್ರಾಯಶ್ಚಿತ್ತಕ್ಕಾಗಿ ಹಾಗು ದೋಷಪರಿಹಾರಕ್ಕಾಗಿ ತರಲಾದ ಹಣ ಯಾಜಕರ ಭಾಗವಾಗಿತ್ತು. ಅದು ಸರ್ವೇಶ್ವರನ ಆಲಯಕ್ಕೆ ಸೇರುತ್ತಿರಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಪ್ರಾಯಶ್ಚಿತ್ತ ಬಲಿಯ ಹಣವನ್ನು, ಪಾಪ ಪರಿಹಾರದ ಬಲಿಯ ಹಣವನ್ನು ಯೆಹೋವ ದೇವರ ಆಲಯಕ್ಕೆ ತೆಗೆದುಕೊಂಡು ಬರಲಿಲ್ಲ, ಅದು ಯಾಜಕರದಾಗಿತ್ತು.