2 Kings 12:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಹಜಾಯೇಲನು ಅರಾಮ್ಯರ ರಾಜನಾಗಿದ್ದನು. ಹಜಾಯೇಲನು ಗತ್ ಊರನ್ನೂ ಸೋಲಿಸಿದನು. ಆಗ ಅವನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಹೋಗಲು ಯೋಚಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆ ಹಾಕಿ, ಅದನ್ನು ಸ್ವಾಧೀನಪಡಿಸಿಕೊಂಡನು. ಅಲ್ಲಿಂದ ಅವನು ಯೆರೂಸಲೇಮಿಗೆ ವಿರೋಧವಾಗಿ ಹೊರಟನು.
Kannada BSI Bible 2016
ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ ಅದನ್ನು ವಶಪಡಿಸಿಕೊಂಡನು. ಹಜಾಯೇಲನು ಯೆರೂಸಲೇ ಮಿಗೆ ಹೋಗಲು ತನ್ನ ಮುಖವನ್ನು ತಿರುಗಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆಹಾಕಿ ಅದನ್ನು ಸ್ವಾಧೀನಪಡಿಸಿಕೊಂಡು ಅಲ್ಲಿಂದ ಯೆರೂಸಲೇವಿುಗೆ ವಿರೋಧವಾಗಿ ಹೊರಟನು.
Kannada Bible (KNCL) BSI 2016
ಇದೇ ಕಾಲದಲ್ಲಿ ಸಿರಿಯಾದವರ ಅರಸನಾದ ಹಜಾಯೇಲನು ಬಂದು ಗತ್ ಊರಿಗೆ ಮುತ್ತಿಗೆಹಾಕಿ ಅದನ್ನು ಸ್ವಾಧೀನಪಡಿಸಿಕೊಂಡು ಅಲ್ಲಿಂದ ಜೆರುಸಲೇಮಿಗೆ ದಾಳಿಯಿಡಲು ಹೊರಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಸಮಯದಲ್ಲಿ ಅರಾಮ್ಯರ ಅರಸನಾದ ಹಜಾಯೇಲನು ಹೋಗಿ ಗತ್ ಊರಿನ ಮೇಲೆ ಯುದ್ಧಮಾಡಿ, ಅದನ್ನು ವಶಪಡಿಸಿಕೊಂಡನು. ನಂತರ ಹಜಾಯೇಲನು ಯೆರೂಸಲೇಮಿನ ಮೇಲೆ ದಾಳಿಮಾಡಲು ಹೊರಟನು.