2 Kings 17:1 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಲನ ಮಗನಾದ ಹೋಶೇಯನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಇದು ಅಹಾಜನು ಯೆಹೂದದ ರಾಜನಾಗಿದ್ದ ಹನ್ನೆರಡನೆಯ ವರ್ಷದಲ್ಲಾಯಿತು. ಹೋಶೇಯನು ಒಂಭತ್ತು ವರ್ಷ ಆಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗನಾದ ಹೋಶೇಯನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಒಂಭತ್ತು ವರ್ಷ ಆಳಿದನು.
Kannada BSI Bible 2016
ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಏಲನ ಮಗನಾದ ಹೋಶೇಯನು ಸಮಾರ್ಯದಲ್ಲಿ ಇಸ್ರಾ ಯೇಲಿನ ಮೇಲೆ ಒಂಭತ್ತು ವರುಷ ಆಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದದ ಅರಸನಾದ ಆಹಾಜನ ಆಳಿಕೆಯ ಹನ್ನೆರಡನೆಯ ವರುಷದಲ್ಲಿ ಏಲನ ಮಗನಾದ ಹೋಶೇಯನು ಇಸ್ರಾಯೇಲ್ಯರ ಅರಸನಾಗಿ ಸಮಾರ್ಯದಲ್ಲಿ ಒಂಭತ್ತು ವರುಷ ಆಳಿದನು.
Kannada Bible (KNCL) BSI 2016
ಜುದೇಯದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗ ಹೋಶೇಯನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಒಂಬತ್ತು ವರ್ಷ ಆಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗ ಹೋಶೇಯನು ಇಸ್ರಾಯೇಲಿನ ಮೇಲೆ ಸಮಾರ್ಯದಲ್ಲಿ ಅರಸನಾಗಿ, ಒಂಬತ್ತು ವರ್ಷ ಆಳಿದನು.