2 Kings 17:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಅವರು ಯೆಹೋವನನ್ನು ಗೌರವಿಸಲಿಲ್ಲ. ಆದ್ದರಿಂದ ಅವರ ಮೇಲೆ ಆಕ್ರಮಣಮಾಡಲು ಯೆಹೋವನು ಸಿಂಹಗಳನ್ನು ಕಳುಹಿಸಿದನು. ಈ ಸಿಂಹಗಳು ಆ ಜನರಲ್ಲಿ ಕೆಲವರನ್ನು ಕೊಂದುಹಾಕಿದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರಿಗೆ ಆರಂಭದಲ್ಲಿ ಯೆಹೋವನ ಭಯಭಕ್ತಿ ಇರಲಿಲ್ಲ. ಆದುದರಿಂದ ಆತನು ಸಿಂಹಗಳನ್ನು ಕಳುಹಿಸಿದನು. ಅವು ಅವರಲ್ಲಿ ಕೆಲವರನ್ನು ಕೊಂದವು.
Kannada BSI Bible 2016
ಆದರೆ ಅವರು ಅಲ್ಲಿ ವಾಸಿಸಲು ಆರಂಭಿಸಿದಾಗ ಅವರು ಕರ್ತನಿಗೆ ಭಯ ಪಡದಿದದ್ದರಿಂದ ಕರ್ತನು ಅವರ ಮಧ್ಯದಲ್ಲಿ ಸಿಂಹ ಗಳನ್ನು ಕಳುಹಿಸಿದನು. ಅವು ಅವರಲ್ಲಿ ಕೆಲವರನ್ನು ಕೊಂದುಹಾಕಿದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರಿಗೆ ಆರಂಭದಲ್ಲಿ ಯೆಹೋವನ ಭಯಭಕ್ತಿ ಇರಲಿಲ್ಲವಾದದರಿಂದ ಆತನು ಸಿಂಹಗಳನ್ನು ಕಳುಹಿಸಿದನು; ಅವು ಅವರಲ್ಲಿ ಅನೇಕರನ್ನು ಕೊಂದವು.
Kannada Bible (KNCL) BSI 2016
ಅವರಿಗೆ ಆರಂಭದಲ್ಲಿ ಸರ್ವೇಶ್ವರನಲ್ಲಿ ಭಯಭಕ್ತಿ ಇರಲಿಲ್ಲ. ಆದ್ದರಿಂದ ಸರ್ವೇಶ್ವರ ಸಿಂಹಗಳನ್ನು ಕಳುಹಿಸಿದರು; ಅವು ಅವರಲ್ಲಿ ಅನೇಕರನ್ನು ಕೊಂದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅವರು ಅಲ್ಲಿ ವಾಸಿಸಲು ಆರಂಭಿಸಿದಾಗ, ಯೆಹೋವ ದೇವರಿಗೆ ಭಯಪಡದ ಕಾರಣ, ಯೆಹೋವ ದೇವರು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದರು. ಅವು ಅವರಲ್ಲಿ ಕೆಲವರನ್ನು ಕೊಂದುಹಾಕಿದವು.