2 Kings 17:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಶ್ಶೂರದ ರಾಜನಾದ ಶಲ್ಮನೆಸರನು ಹೋಶೇಯನ ವಿರುದ್ಧ ಯುದ್ಧಕ್ಕೆ ಬಂದನು. ಶಲ್ಮನೆಸರನು ಹೋಶೇಯನನ್ನು ಸೋಲಿಸಿದನು. ಆದ್ದರಿಂದ ಹೋಶೇಯನು ಶಲ್ಮನೆಸರನಿಗೆ ಸೇವಕನಾಗಿ ಕಪ್ಪಕಾಣಿಕೆಯನ್ನು ಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಶ್ಶೂರದ ಅರಸನಾದ ಶಲ್ಮನೆಸರನು ಹೋಶೇಯನಿಗೆ ವಿರುದ್ಧವಾಗಿ ಬಂದಾಗ, ಹೋಶೇಯನು ಅವನಿಗೆ ಅಧೀನನಾಗಿ ಕಪ್ಪಕೊಡುವವನಾದನು.
Kannada BSI Bible 2016
ಅಶ್ಶೂರಿನ ಅರಸನಾದ ಶಲ್ಮನೆಸೆರನು ಅವನ ಮೇಲೆ ಬಂದದ್ದರಿಂದ ಹೋಶೇಯನು ಅವನಿಗೆ ಸೇವಕ ನಾಗಿ ಕಪ್ಪವನ್ನು ಕೊಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಶ್ಶೂರದ ಅರಸನಾದ ಶಲ್ಮನೆಸೆರನು ಇವನಿಗೆ ವಿರೋಧವಾಗಿ ಬಂದಾಗ ಇವನು ಅವನಿಗೆ ಅಧೀನನಾಗಿ ಕಪ್ಪಕೊಡುವವನಾದನು.
Kannada Bible (KNCL) BSI 2016
ಅಸ್ಸೀರಿಯದ ಅರಸ ಶಲ್ಮನೆಸರನು ಇವನಿಗೆ ವಿರುದ್ಧ ದಂಡೆತ್ತಿ ಬಂದಾಗ ಇವನು ಇವನಿಗೆ ಅಧೀನನಾಗಿ ಕಪ್ಪಕೊಡುವವನಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಸ್ಸೀರಿಯದ ಅರಸನಾದ ಶಲ್ಮನೆಸೆರನು ಅವನ ವಿರುದ್ಧ ಬಂದದ್ದರಿಂದ, ಹೋಶೇಯನು ಅವನಿಗೆ ಸೇವಕನಾಗಿ ಅವನಿಗೆ ಕಪ್ಪವನ್ನು ಕೊಟ್ಟನು.