2 Kings 17:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ರಹಸ್ಯವಾದ ಕೆಟ್ಟಕಾರ್ಯಗಳನ್ನು ಮಾಡಿದರು. ಇಸ್ರೇಲರು ಚಿಕ್ಕ ಊರಿನಿಂದಿಡಿದು ದೊಡ್ಡ ನಗರದವರೆಗೂ ತಮ್ಮ ಎಲ್ಲಾ ನಗರಗಳಲ್ಲಿ ಉನ್ನತಸ್ಥಳಗಳನ್ನು ನಿರ್ಮಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರು ತಮ್ಮ ದೇವರಾದ ಯೆಹೋವನಿಗೆ ವಿರುದ್ಧವಾದ ಗುಪ್ತವಾದ ದುಷ್ಟ ಕೃತ್ಯಗಳನ್ನು ನಡಿಸಿದರು. ಕಾವಲುಗಾರರ ಗೋಪುರವುಳ್ಳ ಚಿಕ್ಕ ಊರು ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಪಟ್ಟಣದವರೆಗಿರುವ ಎಲ್ಲಾ ಊರುಗಳಲ್ಲಿ ತಮಗೋಸ್ಕರ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು.
Kannada BSI Bible 2016
ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗುಪ್ತವಾಗಿ ತಮ್ಮ ದೇವರಾದ ಯೆಹೋವನಿಗೆ ವಿರೋಧವಾದ ಕೃತ್ಯಗಳನ್ನು ನಡಿಸಿದರು; ಕಾವಲುಗಾರರ ಬುರುಜುಳ್ಳ ಚಿಕ್ಕ ಊರು ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಪಟ್ಟಣದವರೆಗಿರುವ ಎಲ್ಲಾ ಊರುಗಳಲ್ಲಿ ತಮಗೋಸ್ಕರ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು;
Kannada Bible (KNCL) BSI 2016
ತಮ್ಮ ದೇವರಾದ ಆ ಸರ್ವೇಶ್ವರನಿಗೆ ವಿರೋಧವಾದ ಕೃತ್ಯಗಳನ್ನು ಗುಪ್ತವಾಗಿ ನಡೆಸಿದರು; ಕಾವಲುಗಾರರ ಗೋಪುರವುಳ್ಳ ಚಿಕ್ಕ ಊರು ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಪಟ್ಟಣದವರೆಗಿರುವ ಎಲ್ಲಾ ಊರುಗಳಲ್ಲಿ ತಮಗಾಗಿ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲರು ರಹಸ್ಯವಾಗಿ ತಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಅಯುಕ್ತವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲುಗೊಂಡು ಕೋಟೆಯುಳ್ಳ ಪಟ್ಟಣಗಳವರೆಗೂ, ತಮ್ಮ ಸಮಸ್ತ ಪಟ್ಟಣಗಳಲ್ಲಿ ತಮಗೆ ಪೂಜಾಸ್ಥಳಗಳನ್ನು ಕಟ್ಟಿಸಿಕೊಂಡಿದ್ದರು.