2 Kings 18:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಮುರಿದುಬಿದ್ದಿರುವ ದಂಟನ್ನು ಊರುಗೋಲೆಂದು ನಂಬಿ ಭರವಸೆಯಿಟ್ಟಿರುವೆ! ಈಜಿಪ್ಟ್ ಊರುಗೋಲಾಗಿದೆ. ಒಬ್ಬ ಮನುಷ್ಯನು ಈ ಊರುಗೋಲಿನ ಮೇಲೆ ಭರವಸೆಯಿಟ್ಟರೆ ಅದು ಮುರಿದು ಬೀಳುತ್ತದೆ ಮತ್ತು ಅವನ ಕೈಯನ್ನೇ ಚುಚ್ಚಿ ಅವನಿಗೆ ನೋವನ್ನು ಉಂಟುಮಾಡುತ್ತದೆ! ಈಜಿಪ್ಟಿನ ರಾಜನು ತನ್ನನ್ನು ನಂಬಿದ ಜನರೆಲ್ಲರಿಗೂ ಇದೇ ರೀತಿಯಲ್ಲಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜಜ್ಜಿದ ದಂಟಿಗೆ ಸಮಾನವಾಗಿರುವ ಐಗುಪ್ತದಲ್ಲಿ ಭರವಸವಿಟ್ಟಿರುವೆಯೋ? ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವುದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ; ಐಗುಪ್ತದ ಅರಸನಾದ ಫರೋಹನನಲ್ಲಿ ಭರವಸವಿಟ್ಟವರಿಗೆ ಇದೇ ಗತಿಯಾಗುವುದು.
Kannada BSI Bible 2016
ನೀನು ನನಗೆ ವಿರೋಧವಾಗಿ ತಿರುಗಿ ಬೀಳು ವದಕ್ಕೆ ಯಾರಲ್ಲಿ ಭರವಸ ಇಟ್ಟಿದ್ದೀ? ಇಗೋ, ನೀನು ಮುರಿದ ಬೆತ್ತದ ಕೋಲಾದ ಐಗುಪ್ತದ ಮೇಲೆ ಭರ ವಸವಾಗಿದ್ದೀ. ಅದರ ಮೇಲೆ ಮನುಷ್ಯನು ಊರಿ ಕೊಂಡರೆ ಅದು ಅವನ ಕೈಯಲ್ಲಿ ಹೊಕ್ಕು ಚುಚ್ಚುವದು. ಐಗುಪ್ತದ ಅರಸನಾದ ಫರೋಹನು ತನ್ನಲ್ಲಿ ಭರವಸ ವಾಗಿರುವ ಎಲ್ಲರಿಗೂ ಹೀಗೆಯೇ ಇದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಜಜ್ಜಿದ ದಂಟಿಗೆ ಸಮಾನವಾಗಿರುವ ಐಗುಪ್ತದಲ್ಲಿ ಭರವಸವಿಟ್ಟಿರುತ್ತೀಯಷ್ಟೆ. ಒಬ್ಬನು ಅಂಥ ದಂಟಿನ ಮೇಲೆ ಕೈಯೂರಿಕೊಳ್ಳುವದಾದರೆ ಅದು ಅವನ ಕೈಯನ್ನು ತಿವಿದು ಒಳಗೆ ಹೋಗುತ್ತದಲ್ಲವೇ! ಐಗುಪ್ತದ ಅರಸನಾದ ಫರೋಹನಲ್ಲಿ ಭರವಸವಿಟ್ಟವರಿಗೆ ಅದೇ ಗತಿಯಾಗುವದು.
Kannada Bible (KNCL) BSI 2016
ಮುರಿದ ಜೊಂಡಿಗೆ ಸಮಾನವಾದ ಈಜಿಪ್ಟಿನ ಮೇಲೆ ನಿನಗೆ ಭರವಸೆಯಿದೆಯಷ್ಟೆ. ಅಂಥ ಜೊಂಡನ್ನು ಊರಿಕೊಳ್ಳುವವನ ಕೈಯನ್ನೇ ಚುಚ್ಚಿ ತಿವಿಯುವ ಕೋಲು ಅದು. ಈಜಿಪ್ಟಿನ ರಾಜ ಫರೋಹನಲ್ಲಿ ಭರವಸೆಯಿಟ್ಟವರಿಗೆ ಆಗುವ ಗತಿ ಇದೇ.’
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು! ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು.