2 Kings 19:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ಯೆಹೋವನನ್ನು ನಿಂದಿಸಲು ನಿನ್ನ ಸಂದೇಶಕರನ್ನು ಬಳಸಿದೆ, “ನಾನು ನನ್ನ ಅನೇಕ ರಥಗಳೊಂದಿಗೆ ಉನ್ನತಗಿರಿಗಳಿಗೆ ಬಂದೆನು. ನಾನು ಲೆಬನೋನಿನ ದುರ್ಗಮ ಸ್ಥಳಗಳಿಗೆ ಹೋದೆನು. ನಾನು ಲೆಬನೋನಿನ ಎತ್ತರವಾದ ದೇವದಾರು ಮರಗಳನ್ನೂ ಲೆಬನೋನಿನ ಉತ್ತಮ ತುರಾಯಿಮರಗಳನ್ನೂ ಕಡಿದುರುಳಿಸಿದೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನಿನ್ನ ದೂತರ ಮುಖಾಂತರವಾಗಿ ಕರ್ತನನ್ನು ನಿಂದಿಸಿ, ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ. ಅದರ ಎತ್ತರವಾದ ದೇವದಾರುವೃಕ್ಷಗಳನ್ನೂ ಶ್ರೇಷ್ಠವಾದ ತುರಾಯಿಮರಗಳನ್ನೂ ಕಡಿದುಬಿಟ್ಟಿದ್ದೇನೆ. ಅಲ್ಲಿನ ಬಹು ದೂರ ನಿವಾಸಸ್ಥಳಗಳನ್ನೂ, ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.
Kannada BSI Bible 2016
ನಿನ್ನ ಸೇವಕರ ಮುಖಾಂತರ ಕರ್ತನನ್ನು ನಿಂದಿಸಿ ಹೇಳಿದ್ದು--ನಾನು ನನ್ನ ಹೆಚ್ಚಾದ ರಥಗಳಿಂದ ಪರ್ವತಗಳ ಶಿಖರಕ್ಕೂ ಲೆಬನೋನಿನ ಪಾರ್ಶ್ವಗಳಿಗೂ ಹೋಗಿ ಅದರ ಉನ್ನತ ವಾದ ದೇವದಾರುಗಳನ್ನೂ ಅದರ ಮುಖ್ಯವಾದ ತುರಾಯಿ ಮರಗಳನ್ನೂ ಕಡಿದು ಅದರ ಅಂಚಿನ ಗಡಿ ಸ್ಥಳಗಳಲ್ಲಿಯೂ ಅದರ ಫಲವುಳ್ಳ ಅಡವಿಯ ಲ್ಲಿಯೂ ಸೇರುತ್ತೇನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನಿನ್ನ ದೂತರ ಮುಖಾಂತರವಾಗಿ ಕರ್ತನನ್ನು ನಿಂದಿಸಿ - ನನ್ನ ರಥಸಮೂಹದೊಡನೆ ಪರ್ವತ ಶಿಖರಗಳನ್ನು ಹತ್ತಿದ್ದೇನೆ; ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರುವೃಕ್ಷಗಳನ್ನೂ ಶ್ರೇಷ್ಠವಾದ ತುರಾಯಿಮರಗಳನ್ನೂ ಕಡಿದುಬಿಟ್ಟಿದ್ದೇನೆ; ಅಲ್ಲಿನ ಬಹುದೂರ ನಿವಾಸಸ್ಥಳವನ್ನೂ ಉದ್ಯಾನ ವನಗಳನ್ನೂ ಪ್ರವೇಶಿಸಿದ್ದೇನೆ;
Kannada Bible (KNCL) BSI 2016
ನೀನು ನಿನ್ನ ದೂತರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ, ಅಲ್ಲದೆ ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ: ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ! ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ ಒಳಹೊಕ್ಕಿದ್ದೇನೆ ಅಲ್ಲಿನ ದೂರದ ನಿವಾಸಸ್ಥಳಗಳನ್ನೇ, ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡು ಮೇಡುಗಳನ್ನೇ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ನಿನ್ನ ದೂತರ ಮುಖಾಂತರ ಯೆಹೋವ ದೇವರನ್ನು ನಿಂದಿಸಿರುವೆ. ಇದಲ್ಲದೆ ನೀನು ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿದ್ದೀ, “ನಾನು ನನ್ನ ರಥಸಮೂಹದೊಡನೆ ಪರ್ವತಗಳ ಶಿಖರಗಳನ್ನು ಹತ್ತಿದ್ದೇನೆ, ಲೆಬನೋನಿನ ಎತ್ತರಗಳಿಗೆ ಹೋಗಿದ್ದೇನೆ. ಅದರ ಉನ್ನತವಾದ ದೇವದಾರುಗಳನ್ನೂ, ಅತ್ಯುತ್ತಮ ತುರಾಯಿ ಮರಗಳನ್ನೂ ಕಡಿದುಹಾಕಿದ್ದೇನೆ. ಅದರ ಅಂಚಿನ ಗಡಿಸ್ಥಳಗಳಲ್ಲಿಯೂ, ಅದರ ಫಲಭರಿತ ಅಡವಿಯಲ್ಲಿಯೂ ಪ್ರವೇಶಿಸಿದ್ದೇನೆ.