2 Kings 19:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೀನು ಮೇಲೇಳುವುದೂ ಕುಳಿತುಕೊಳ್ಳುವುದೂ ನನಗೆ ಗೊತ್ತಿದೆ. ನೀನು ಒಳಗೆ ಬರುವುದೂ ಹೊರಗೆ ಹೋಗುವುದೂ ನನಗೆ ತಿಳಿದಿದೆ. ನೀನು ನನ್ನ ವಿರುದ್ಧ ಯಾವಾಗ ದಂಗೆಯೇಳುವೆ ಎಂಬುದೂ ನನಗೆ ತಿಳಿದಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ಕುಳಿತುಕೊಳ್ಳುವುದು, ಹೋಗುವುದು, ಬರುವುದೂ ನನಗೆ ಗೊತ್ತುಂಟು. ನೀನು ನನ್ನ ಮೇಲೆ ರೌದ್ರಾವೇಷವಾಗಿರುವುದನ್ನು ಬಲ್ಲೆನು.
Kannada BSI Bible 2016
ನಿನ್ನ ಕೂತಿರುವಿಕೆಯನ್ನೂ ಹೊರಡುವಿಕೆಯನ್ನೂ ನಿನ್ನ ಬರುವಿಕೆಯನ್ನೂ ನೀನು ನನಗೆ ವಿರೋಧವಾಗಿ ಮಾಡುವ ರೌದ್ರವನ್ನೂ ನಾನು ಬಲ್ಲೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಕೂತುಕೊಳ್ಳುವದೂ ಹೋಗುವದೂ ಬರುವದೂ ನನಗೆ ಗೊತ್ತುಂಟು; ನೀನು ನನ್ನ ಮೇಲೆ ರೌದ್ರಾವೇಶನಾಗಿರುವದನ್ನು ಬಲ್ಲೆನು.
Kannada Bible (KNCL) BSI 2016
ನನಗೆ ಗೊತ್ತಿದೆ ನೀ ಕೂರುವುದು, ನೀ ಹೋಗಿಬರುವುದು ನನಗೆ ತಿಳಿದಿದೆ ನೀ ನನ್ನ ಮೇಲೆ ರೌದ್ರಾವೇಶಗೊಂಡಿರುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಆದರೆ ನೀನು ಎಲ್ಲಿ ವಾಸಿಸುವೆಯೆಂಬುದನ್ನು ನೀನು ಯಾವಾಗ ಬರುವೆ ಹೋಗುವೆ ಎಂಬುದನ್ನು ನೀನು ನನ್ನ ಮೇಲೆ ಹೇಗೆ ಕೋಪಿಸಿಕೊಳ್ಳುವೆ? ಎಂಬುದನ್ನು ನಾನು ಬಲ್ಲೆನು.