2 Kings 2:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಅವನಿಗೆ, “ನೋಡು, ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ. ನಿನ್ನ ಒಡೆಯನನ್ನು ಹುಡುಕಲು ದಯವಿಟ್ಟು ಅವರಿಗೆ ಅವಕಾಶಕೊಡು. ಯೆಹೋವನ ಆತ್ಮವು ಎಲೀಯನನ್ನು ಮೇಲಕ್ಕೆ ಎತ್ತಿಕೊಂಡು ಹೋಗಿ ಯಾವುದಾದರೂ ಬೆಟ್ಟದ ಮೇಲಾಗಲಿ ಅಥವಾ ಕಣಿವೆಯಲ್ಲಾಗಲಿ ಬೀಳಿಸಿರಬೇಕು” ಎಂದು ಹೇಳಿದರು. ಆದರೆ ಎಲೀಷನು, “ಇಲ್ಲ, ಎಲೀಯನನ್ನು ಹುಡುಕಲು ಜನರನ್ನು ಕಳುಹಿಸಬೇಡಿ!” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅವರು ಅವನಿಗೆ, “ನಿನ್ನ ಸೇವಕರಾದ ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠಜನರಿದ್ದಾರೆ. ನಿನ್ನ ಯಜಮಾನನ್ನು ಹುಡುಕುವುದಕ್ಕೆ ಅವರಿಗೆ ಅಪ್ಪಣೆಯಾಗಲಿ ಯೆಹೋವನ ಆತ್ಮವು ಅವನನ್ನು ಎತ್ತಿಕೊಂಡು ಹೋಗಿ ಒಂದು ಬೆಟ್ಟದ ಮೇಲಾಗಲಿ ತಗ್ಗಿನಲ್ಲಾಗಲಿ ಇಟ್ಟಿರಬಹುದು” ಎಂದು ಹೇಳಿದರು. ಅವನು ಅವರಿಗೆ, “ನೀವು ಅವರನ್ನು ಕಳುಹಿಸಬೇಡಿರಿ” ಎಂದನು.
Kannada BSI Bible 2016
ಇದ ಲ್ಲದೆ ಅವರು ಅವನಿಗೆ--ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ; ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಯಾಗಲಿ, ಒಂದು ವೇಳೆ ಕರ್ತನ ಆತ್ಮನು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ ತಗ್ಗಿನ ಲ್ಲಾದರೂ ಹಾಕಿರಬಹುದು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಅವರು ಅವನಿಗೆ - ನಿನ್ನ ಸೇವಕರಾದ ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠ ಜನರಿದ್ದಾರೆ; ನಿನ್ನ ಯಜಮಾನನನ್ನು ಹುಡುಕಹೋಗುವದಕ್ಕೆ ಅವರಿಗೆ ಅಪ್ಪಣೆಯಾಗಲಿ. ಯೆಹೋವನ ಆತ್ಮವು ಅವನನ್ನು ಎತ್ತಿಕೊಂಡು ಹೋಗಿ ಒಂದು ಬೆಟ್ಟದ ಮೇಲಾಗಲಿ ತಗ್ಗಿನಲ್ಲಾಗಲಿ ಇಟ್ಟಿರಬಹುದು ಎಂದು ಹೇಳಿದರು; ಅವನು ಅವರಿಗೆ - ನೀವು ಕಳುಹಿಸಬೇಡಿರಿ ಅಂದನು.
Kannada Bible (KNCL) BSI 2016
ಅನಂತರ ಅವರು ಅವನಿಗೆ, “ನಿಮ್ಮ ಸೇವಕರಾದ ನಮ್ಮಲ್ಲಿ ಐವತ್ತುಮಂದಿ ಬಲಿಷ್ಠ ಜನರಿದ್ದಾರೆ; ನಿಮ್ಮ ಯಜಮಾನರನ್ನು ಹುಡುಕಲು ಹೋಗುವುದಕ್ಕೆ ಅವರಿಗೆ ಅಪ್ಪಣೆಯಾಗಲಿ. ಸರ್ವೇಶ್ವರನ ಆತ್ಮ ಅವರನ್ನು ಎತ್ತಿಕೊಂಡುಹೋಗಿ ಒಂದು ಬೆಟ್ಟದ ಮೇಲಾಗಲಿ, ತಗ್ಗಿನಲ್ಲಾಗಲಿ ಇಟ್ಟಿರಬಹುದು,” ಎಂದು ಹೇಳಿದರು. ಅವನು, “ನೀವು ಕಳುಹಿಸಬೇಡಿ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವರು ಅವನಿಗೆ, “ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ. ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಆಗಲಿ. ಒಂದು ವೇಳೆ ಯೆಹೋವ ದೇವರ ಆತ್ಮರು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ, ತಗ್ಗಿನಲ್ಲಾದರೂ ಇಟ್ಟಿರಬಹುದು,” ಎಂದರು. ಅದಕ್ಕೆ ಅವನು, “ಕಳುಹಿಸಬೇಡಿರಿ,” ಎಂದನು.