2 Kings 2:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಗರದ ಜನರು ಎಲೀಷನಿಗೆ, “ಸ್ವಾಮೀ, ಈ ನಗರವು ಒಳ್ಳೆಯ ಸ್ಥಳದಲ್ಲಿದೆಯೆಂಬುದನ್ನು ನೀನು ನೋಡುತ್ತಿರುವೆ. ಆದರೆ ನೀರು ತುಂಬಾ ಕೆಟ್ಟಿದೆ. ಆ ಕಾರಣದಿಂದಲೇ ಈ ಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರಿಕೋವಿನ ಜನರು ಎಲೀಷನಿಗೆ, “ನಮ್ಮ ಒಡೆಯನಾದ ನಿನಗೆ ಗೊತ್ತಿರುವಂತೆ, ಈ ಊರು ಕಟ್ಟಲ್ಪಟ್ಟಿರುವ ಸ್ಥಳವು ಒಳ್ಳೆಯದಾಗಿದೆ. ಆದರೆ ನೀರು ಕೆಟ್ಟದ್ದಾಗಿರುವುದರಿಂದ ಬಂಜೆತನ ಉಂಟಾಗಿದೆ” ಎಂದು ಹೇಳಿದರು.
Kannada BSI Bible 2016
ಆಗ ಆ ಪಟ್ಟಣದ ಜನರು ಎಲೀಷನಿಗೆ-- ಇಗೋ, ಈ ಪಟ್ಟಣದ ಸ್ಥಳವು ಒಳ್ಳೇದಾಗಿದೆ ಎಂದು ನಮ್ಮ ಒಡೆಯನು ನೋಡುತ್ತಾನೆ; ಆದರೆ ನೀರು ಕೆಟ್ಟದ್ದು, ಭೂಮಿ ಬಂಜೆಯಾದದ್ದು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರಿಕೋವಿನ ಜನರು ಎಲೀಷನಿಗೆ - ನಮ್ಮ ಒಡೆಯನಾದ ನಿನಗೆ ಗೊತ್ತಿರುವಂತೆ ಈ ಊರು ಕಟ್ಟಲ್ಪಟ್ಟಿರುವ ಸ್ಥಳವು ಒಳ್ಳೇದಾಗಿದೆ; ಆದರೆ ನೀರು ಕೆಟ್ಟದ್ದಾಗಿರುವದರಿಂದ ಬಂಜೆತನ ಹೆಚ್ಚು ಎಂದು ಹೇಳಿದರು.
Kannada Bible (KNCL) BSI 2016
ಜೆರಿಕೋವಿನ ಜನರು ಎಲೀಷ, “ನಮ್ಮ ಒಡೆಯರಾದ ನಿಮಗೆ ಗೊತ್ತಿರುವಂತೆ ಈ ಊರು ಕಟ್ಟಿಸಿರುವ ಸ್ಥಳ ಚೆನ್ನಾಗಿದೆ. ಆದರೆ ನೀರು ಕೆಟ್ಟದ್ದು. ಆದುದರಿಂದ ಗರ್ಭಪಾತ ಹೆಚ್ಚು,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಪಟ್ಟಣದ ಮನುಷ್ಯರು ಎಲೀಷನಿಗೆ, “ಈ ಪಟ್ಟಣದ ಸ್ಥಳವು ಒಳ್ಳೆಯದಾಗಿದೆ. ನಮ್ಮ ಯಜಮಾನನೇ, ನೋಡು ನಿನಗೆ ಕಾಣುವುದು. ಆದರೆ ನೋಡು ನೀರು ಕೆಟ್ಟದ್ದು, ಭೂಮಿ ಬಂಜೆಯಾದದ್ದು,” ಎಂದರು.