2 Kings 21:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಇಸ್ರೇಲಿನ ದೇವರು ಹೀಗೆನ್ನುತ್ತಾನೆ: ‘ಇಗೋ, ಜೆರುಸಲೇಮಿಗೂ ಯೆಹೂದಕ್ಕೂ ಎಷ್ಟು ತೊಂದರೆಯನ್ನು ತರುತ್ತೇನೆಂದರೆ, ಅದನ್ನು ಕೇಳಿದ ಯಾರಾದರೂ ನಡುಗಿಬಿಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲಿನ ದೇವರಾದ ಯೆಹೋವನೆಂಬ ನಾನು ಯೆರೂಸಲೇಮಿನವರ ಮೇಲೆಯೂ, ಯೆಹೂದದವರ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವರ ಎರಡು ಕಿವಿಗಳು ಬಿರಿದು ಹೋಗುವವು.
Kannada BSI Bible 2016
ಇಗೋ, ನಾನು ಯೆರೂಸಲೇಮಿನ ಮೇಲೆಯೂ ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವನ ಎರಡೂ ಕಿವಿಗಳು ಕಿರಗುಟ್ಟುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್‍ದೇವರಾದ ಯೆಹೋವನೆಂಬ ನಾನು ಯೆರೂಸಲೇವಿುನವರ ಮೇಲೆಯೂ ಯೆಹೂದದವರ ಮೇಲೆಯೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವರ ಎರಡು ಕಿವಿಗಳೂ ಮೊರ್ರೆನ್ನುವವು.
Kannada Bible (KNCL) BSI 2016
ಆದ್ದರಿಂದ ಇಸ್ರಯೇಲ್ ದೇವರಾದ ಸರ್ವೇಶ್ವರ ಎಂಬ ನಾನು ಜೆರುಸಲೇಮಿನವರ ಮೇಲೂ ಜುದೇಯದವರ ಮೇಲೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವರ ಎರಡು ಕಿವಿಗಳೂ ಬಿರಿಯುವುವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲಿನ ಯೆಹೋವ ದೇವರಾದ ನಾನು ಯೆರೂಸಲೇಮಿನ ಮೇಲೆಯೂ, ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳು ಕಿರಗುಟ್ಟುವುವು.