2 Kings 22:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಂತರ ಯಾಜಕರು ದೇವಾಲಯದಲ್ಲಿ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯಸ್ಥರಿಗೆ ಕೊಡಲಿ. ಯಾಜಕರು ದೇವಾಲಯವನ್ನು ದುರಸ್ತಿ ಮಾಡುವ ಕೆಲಸಗಾರರಿಗೆ ಈ ಹಣವನ್ನು ವಿನಿಯೋಗಿಸಲಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಲ್ಲದೆ ಆಲಯದ ಕೆಲಸಮಾಡಿಸುವ ಮುಖ್ಯಸ್ಥರಿಗೆ ಅದನ್ನು ಒಪ್ಪಿಸು ಎಂದು ಹೇಳಬೇಕು, ಮುಖ್ಯಸ್ಥರು ಅದನ್ನು ಯೆಹೋವನ ಆಲಯದ ದುರಸ್ತಿ ಕೆಲಸಕ್ಕೆ ಉಪಯೋಗಿಸಲಿ,
Kannada BSI Bible 2016
ಅವರು ಅದನ್ನು ಕರ್ತನ ಮನೆಯ ಕೆಲಸಮಾಡು ವವರ ಮೇಲೆ ಇರುವ ಕಾವಲುಗಾರರ ಕೈಯಲ್ಲಿ ಒಪ್ಪಿಸಲಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಲಯದ ಕೆಲಸಮಾಡಿಸುವ ಮೊಕ್ತೇಸರರಿಗೆ ಅದನ್ನು ಒಪ್ಪಿಸು ಎಂದು ಹೇಳು.
Kannada Bible (KNCL) BSI 2016
ಮೇಸ್ತ್ರಿಗಳು ಅದನ್ನು ಸರ್ವೇಶ್ವರನ ಆಲಯದ ದುರಸ್ತುಮಾಡುವ ಬಡಗಿ, ಶಿಲ್ಪಿ, ಉಪ್ಪಾರ, ಮೊದಲಾದವರ ಸಂಬಳಕ್ಕಾಗಿಯೂ ದೇವಾಲಯಕ್ಕೆ ಬೇಕಾದ ಮರ, ಕೆತ್ತಿದ ಕಲ್ಲು, ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ ಉಪಯೋಗಿಸಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಅದನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಲಿ.