2 Kings 23:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೋಷೀಯನು, “ನಾನು ನೋಡುತ್ತಿರುವ ಆ ಸ್ಮಾರಕ ಯಾವುದು?” ಎಂದು ಕೇಳಿದನು. ಆ ನಗರದ ಜನರು ಅವನಿಗೆ, “ಅದು ಯೆಹೂದದಿಂದ ಬಂದ ದೇವಮನುಷ್ಯನ ಸಮಾಧಿ. ನೀನು ಬೇತೇಲಿನ ಯಜ್ಞವೇದಿಕೆಗೆ ಮಾಡಿದ ಕಾರ್ಯಗಳನ್ನು ಕುರಿತು ಈ ಪ್ರವಾದಿಯು ಬಹಳ ಕಾಲದ ಹಿಂದೆಯೇ ಹೇಳಿದ್ದನು” ಎಂದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇದಲ್ಲದೆ, ಅವನು ಒಂದು ಸಮಾಧಿಶಿಲೆಯನ್ನು ಕಂಡು, ಅದು ಏನು? ಎಂದು ವಿಚಾರಿಸಲು ಆ ಊರಿನವರು, “ನೀನು ಈಗ ಬೇತೇಲಿನ ಯಜ್ಞವೇದಿಗೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದ ದೇಶದವನಾದ ದೇವರ ಮನುಷ್ಯನ ಸಮಾಧಿ” ಎಂದು ಉತ್ತರಕೊಟ್ಟರು.
Kannada BSI Bible 2016
ಆಗ ಅವನು--ನಾನು ನೋಡಿದ ಆ ಶಿರೋನಾಮವೇನು ಅಂದನು. ಅದಕ್ಕೆ ಆ ಪಟ್ಟಣದ ಜನರು ಅವನಿಗೆಯೆಹೂದದಿಂದ ಬಂದು ಬೇತೇಲಿನ ಬಲಿಪೀಠಕ್ಕೆ ವಿರೋಧವಾಗಿ ನೀನು ಮಾಡಿದ ಈ ಕಾರ್ಯಗಳನ್ನು ಸಾರಿ ಹೇಳಿದ ದೇವರ ಮನುಷ್ಯನ ಸಮಾಧಿ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇದಲ್ಲದೆ ಅವನು ಒಂದು ಸಮಾಧಿಶಿಲೆಯನ್ನು ಕಂಡು ಅದೇನೆಂದು ವಿಚಾರಿಸಲು ಆ ಊರಿನವರು - ನೀನು ಈಗ ಬೇತೇಲಿನ ಯಜ್ಞವೇದಿಗೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದ ದೇಶದವನಾದ ದೇವರ ಮನುಷ್ಯನ ಸಮಾಧಿಯೆಂದು ಉತ್ತರಕೊಟ್ಟರು.
Kannada Bible (KNCL) BSI 2016
ಇದಲ್ಲದೆ, ಅವನು ಒಂದು ಸಮಾಧಿ ಶಿಲೆಯನ್ನು ಕಂಡು ಅದೇನೆಂದು ವಿಚಾರಿಸಿದನು. ಆ ಊರಿನವರು, “ನೀವು ಈಗ ಬೇತೇಲಿನ ಬಲಿಪೀಠಕ್ಕೆ ಮಾಡಿದ್ದನ್ನು ಮುಂತಿಳಿಸಿದ್ದ ಜುದೇಯ ನಾಡಿನವನಾದ ದೈವಪುರುಷನ ಸಮಾಧಿ ಇದು,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅರಸನು, “ನಾನು ಕಾಣುವ ಈ ಸಮಾಧಿ ಕಲ್ಲು ಯಾರದು?” ಎಂದು ಕೇಳಿದನು. ಅದಕ್ಕೆ ಆ ಊರಿನವರು ಅವನಿಗೆ, “ನೀನು ಈಗ ಬೇತೇಲಿನ ಬಲಿಪೀಠಕ್ಕೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದದ ದೇವರ ಮನುಷ್ಯನ ಸಮಾಧಿ,” ಎಂದರು.