2 Kings 23:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಫರೋಹ ನೆಕೋವನು ಹಮಾತ್ ದೇಶದ ರಿಬ್ಲಾ ಎಂಬಲ್ಲಿ ಯೆಹೋವಾಹಾಜನನ್ನು ಸೆರೆಹಿಡಿದನು. ಆದ್ದರಿಂದ ಯೆಹೋವಾಹಾಜನು ಜೆರುಸಲೇಮಿನಲ್ಲಿ ಆಳಲಿಲ್ಲ. ಫರೋಹ ನೆಕೋವನು ಮೂರುಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿಯನ್ನು ಮತ್ತು ಮೂವತ್ನಾಲ್ಕು ಕಿಲೋಗ್ರಾಂ ಚಿನ್ನವನ್ನು ಕೊಡುವಂತೆ ಯೆಹೂದದವರನ್ನು ಬಲವಂತಪಡಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಫರೋಹ ನೆಕೋವನು ಇವನನ್ನು ಯೆರೂಸಲೇಮಿನಲ್ಲಿ ಬಹು ದಿನಗಳವರೆಗೆ ಆಳಗೊಡಲಿಲ್ಲ. ಅವನು ಹಮಾತ ದೇಶದ ರಿಬ್ಲಾ ಎಂಬ ಊರಲ್ಲಿ ಇವನನ್ನು ಸೆರೆಯಲ್ಲಿಟ್ಟದ್ದಲ್ಲದೆ ಯೆಹೂದ್ಯರು ಅವನಿಗೆ ನೂರು ತಲಾಂತು ಬೆಳ್ಳಿಯನ್ನೂ, ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾಯಿತು.
Kannada BSI Bible 2016
ಆದರೆ ಅವನು ಯೆರೂಸಲೇಮಿನಲ್ಲಿ ಆಳದ ಹಾಗೆ ಫರೋಹನೆಕೋ ಎಂಬವನು ಹಮಾತ್‌ ದೇಶದ ರಿಬ್ಲಾದಲ್ಲಿ ಅವನನ್ನು ಬಂಧಿಸಿ ದೇಶದ ಮೇಲೆ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾ ಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಫರೋಹ ನೆಕೋವನು ಇವನನ್ನು ಯೆರೂಸಲೇವಿುನಲ್ಲಿ ಬಹು ದಿವಸಗಳವರೆಗೆ ಆಳಗೊಡಲಿಲ್ಲ. ಅವನು ಹಮಾತ್ ದೇಶದ ರಿಬ್ಲಾ ಎಂಬ ಊರಲ್ಲಿ ಇವನನ್ನು ಸೆರೆಯಲ್ಲಿಟ್ಟನು. ಯೆಹೂದ್ಯರು ಅವನಿಗೆ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾಯಿತು.
Kannada Bible (KNCL) BSI 2016
ಫರೋಹ ನೆಕೋವನು ಇವನನ್ನು ಜೆರುಸಲೇಮಿನಲ್ಲಿ ಬಹುದಿನಗಳವರೆಗೆ ಆಳಗೊಡಲಿಲ್ಲ. ಅವನು ಹಮಾತ್ ದೇಶದ ದಿಬ್ಲಾ ಎಂಬ ಊರಲ್ಲಿ ಇವನನ್ನು ಸೆರೆಯಲ್ಲಿಟ್ಟನು. ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ ಮೂವತ್ತನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರಬೇಕಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಫರೋಹ ನೆಕೋವನು ಇವನನ್ನು ಯೆರೂಸಲೇಮಿನಲ್ಲಿ ಆಳದ ಹಾಗೆ ಹಮಾತ್ ದೇಶದ ರಿಬ್ಲಾ ಎಂಬ ಊರಲ್ಲಿ ಬಂಧಿಸಿಟ್ಟನು. ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ, ಮೂವತ್ತ ನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರಬೇಕಾಯಿತು.