2 Kings 24:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಸೆರೆಯಾಳಾಗಿ ಬಾಬಿಲೋನಿಗೆ ಕರೆದೊಯ್ದನು. ನೆಬೂಕದ್ನೆಚ್ಚರನು ರಾಜನ ತಾಯಿಯನ್ನು, ಅವನ ಪತ್ನಿಯರನ್ನು, ಅಧಿಕಾರಿಗಳನ್ನು ಮತ್ತು ದೇಶದ ಪ್ರತಿಷ್ಠಿತರನ್ನು ಕರೆದೊಯ್ದನು. ನೆಬೂಕದ್ನೆಚ್ಚರನು ಅವರನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳನ್ನಾಗಿ ಒಯ್ದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀನನನ್ನೂ, ಅವನ ತಾಯಿ, ಹೆಂಡತಿ, ಕಂಚುಕಿಗಳನ್ನೂ ಮತ್ತು ದೇಶದ ಪ್ರಧಾನ ಪುರುಷರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ತೆಗೆದುಕೊಂಡುಹೋದನು.
Kannada BSI Bible 2016
ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಯೆಹೋಯಾಖೀನನನ್ನೂ ಅವನ ತಾಯಿ ಹೆಂಡತಿಯರು ಕಂಚುಕಿಗಳು
Kannada Bible (KNCL) BSI 2016
ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾನ ಪುರುಷರು ಇವರನ್ನೂ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು ಬಾಬಿಲೋನಿಗೆ ಸೆರೆಯಾಗಿ ಒಯ್ದನು. ಅರಸನ ತಾಯಿಯನ್ನೂ, ಅರಸನ ಹೆಂಡತಿಯರನ್ನೂ, ಅವನ ಅಧಿಕಾರಿಗಳನ್ನೂ, ದೇಶದ ಪ್ರತಿಷ್ಠಿತರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ಒಯ್ದನು.