2 Kings 25:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಾಬಿಲೋನ್ ಸೈನಿಕರು ದೇವಾಲಯದಲ್ಲಿದ್ದ ತಾಮ್ರದ ಸ್ತಂಭಗಳನ್ನು ಚೂರುಚೂರು ಮಾಡಿದರು. ಅವರು ಯೆಹೋವನ ಆಲಯದಲ್ಲಿದ್ದ ತಾಮ್ರದ ದೊಡ್ಡ ತೊಟ್ಟಿಯನ್ನು ಮತ್ತು ತಾಮ್ರದ ಬಂಡಿಯನ್ನು ಚೂರುಚೂರಾಗಿ ಒಡೆದುಹಾಕಿದರು. ನಂತರ ಬಾಬಿಲೋನ್ ಸೈನಿಕರು ತಾಮ್ರದ ಚೂರುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಸ್ದೀಯರು ಯೆಹೋವನ ಆಲಯದಲ್ಲಿದ್ದ ತಾಮ್ರದ ಕಂಬಗಳನ್ನು, ಪೀಠಗಳನ್ನೂ, ಕಡಲಿನ ಆಕಾರದ ಪಾತ್ರೆಯನ್ನೂ ಒಡೆದು ಅವುಗಳ ತಾಮ್ರವನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು.
Kannada BSI Bible 2016
ಇದಲ್ಲದೆ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸ್ತಂಭಗಳನ್ನೂ ಆಧಾರಗಳನ್ನೂ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸಮುದ್ರವೆಂಬ ಪಾತ್ರೆ ಯನ್ನೂ ಕಸ್ದೀಯರು ಒಡೆದು ಹಾಕಿ ಅದರ ಹಿತ್ತಾಳೆ ಯನ್ನು ಬಾಬೆಲಿಗೆ ಒಯ್ದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಸ್ದೀಯರು ಯೆಹೋವನ ಆಲಯದ ಬಳಿಯಲ್ಲಿದ್ದ ತಾಮ್ರದ ಕಂಬಗಳನ್ನೂ ಪೀಠಗಳನ್ನೂ ಸಮುದ್ರವೆನಿಸಿಕೊಂಡ ಪಾತ್ರೆಯನ್ನೂ ಒಡೆದು
Kannada Bible (KNCL) BSI 2016
ಬಾಬಿಲೋನಿಯದವರು ಸರ್ವೇಶ್ವರನ ಆಲಯದಲ್ಲಿದ್ದ ಕಂಚಿನ ಕಂಬಗಳನ್ನೂ ಚಕ್ರದ ಬಂಡಿಗಳನ್ನೂ, ಕಡಲಿನ ಆಕಾರದ ಕಂಚಿನ ಪಾತ್ರೆಯನ್ನೂ ಒಡೆದು ಅವುಗಳ ಕಂಚನ್ನೆಲ್ಲ ಕೊಂಡೊಯ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರ ಆಲಯದಲ್ಲಿದ್ದ ಕಂಚಿನ ಸ್ತಂಭಗಳನ್ನೂ, ಪೀಠಗಳನ್ನೂ, ಕಂಚಿನ ಸಮುದ್ರವೆಂಬ ಪಾತ್ರೆಯನ್ನೂ ಬಾಬಿಲೋನಿಯರು ಒಡೆದುಹಾಕಿ, ಅದರ ಕಂಚನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು.