2 Kings 3:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋಷಾಫಾಟನು, “ಯೆಹೋವನ ನುಡಿಗಳು ಎಲೀಷನಲ್ಲಿವೆ!” ಎಂದು ಹೇಳಿದನು. ಇಸ್ರೇಲಿನ ರಾಜನಾದ ಯೋರಾವುನು, ಯೆಹೋಷಾಫಾಟನು ಮತ್ತು ಎದೋಮಿನ ರಾಜನು ಎಲೀಷನನ್ನು ನೋಡಲು ಹೋದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋಷಾಫಾಟನು, “ಅವನು ಹೇಗೂ ಯೆಹೋವನ ಉತ್ತರವನ್ನು ತಿಳಿಸುವನು” ಅಂದನು. ಆಗ ಇಸ್ರಾಯೇಲ್, ಎದೋಮ್ ರಾಜ್ಯಗಳ ಅರಸರು ಯೆಹೋಷಾಫಾಟನೊಡನೆ ಎಲೀಷನ ಬಳಿಗೆ ಹೋದರು.
Kannada BSI Bible 2016
ಇಸ್ರಾಯೇ ಲಿನ ಅರಸನೂ ಯೆಹೋಷಾಫಾಟನೂ ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋಷಾಫಾಟನು - ಅವನು ಹೇಗೂ ಯೆಹೋವನ ಉತ್ತರವನ್ನು ತಿಳಿಸುವನು ಅಂದದರಿಂದ ಇಸ್ರಾಯೇಲ್ ಎದೋಮ್ ರಾಜ್ಯಗಳ ಅರಸರು ಯೆಹೋಷಾಫಾಟನೊಡನೆ ಎಲೀಷನ ಬಳಿಗೆ ಹೋದರು.
Kannada Bible (KNCL) BSI 2016
ಯೆಹೋಷಾಫಾಟನು, “ಅವನು ಹೇಗೂ ಸರ್ವೇಶ್ವರನ ಉತ್ತರವನ್ನು ತಿಳಿಸುವನು,” ಎಂದದ್ದರಿಂದ ಇಸ್ರಯೇಲ್ ಹಾಗು ಎದೋಮ್ ರಾಜ್ಯಗಳ ಅರಸರು ಯೆಹೋಷಾಫಾಟನೊಡನೆ ಎಲೀಷನ ಬಳಿಗೆ ಬಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಯೆಹೋಷಾಫಾಟನು, “ಅವನ ಬಳಿಯಲ್ಲಿ ಯೆಹೋವ ದೇವರ ವಾಕ್ಯ ಇದೆ,” ಎಂದನು. ಇಸ್ರಾಯೇಲಿನ ಅರಸನೂ, ಯೆಹೋಷಾಫಾಟನೂ, ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು.