2 Kings 3:18 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನಿಗೆ ಇದು ಸುಲಭ ಸಾಧ್ಯ. ಮೋವಾಬ್ಯರನ್ನು ನೀವು ಸೋಲಿಸುವಂತೆ ಆತನೇ ಅವಕಾಶ ಮಾಡುತ್ತಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಯೆಹೋವನ ದೃಷ್ಟಿಯಲ್ಲಿ ಈ ಕಾರ್ಯವೂ ಸುಲಭವಾಗಿರುವುದು. ಅದೇ ರೀತಿಯಾಗಿ ಯೆಹೋವನು ಮೋವಾಬ್ಯರನ್ನೂ ನಿಮ್ಮ ಕೈಗೆ ಒಪ್ಪಿಸುವನು.
Kannada BSI Bible 2016
ಇದಲ್ಲದೆ ಇದು ಕರ್ತನ ದೃಷ್ಟಿಗೆ ಅಲ್ಪವಾಗಿರುವದು; ಆತನು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಕೊಡುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ತನ್ನ ದೃಷ್ಟಿಯಲ್ಲಿ ಅಲ್ಪವಾಗಿರುವ ಈ ಕಾರ್ಯದ ಹೊರತಾಗಿ ಮೋವಾಬ್ಯರನ್ನೂ ನಿಮ್ಮ ಕೈಗೆ ಒಪ್ಪಿಸುವನು.
Kannada Bible (KNCL) BSI 2016
ಅವರು ತಮ್ಮ ದೃಷ್ಟಿಯಲ್ಲಿ ಅಲ್ಪವಾಗಿರುವ ಈ ಕಾರ್ಯ ಮಾತ್ರವಲ್ಲ, ಮೋವಾಬ್ಯರನ್ನೂ ನಿಮ್ಮ ಕೈಗೆ ಒಪ್ಪಿಸುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಇದು ಯೆಹೋವ ದೇವರ ದೃಷ್ಟಿಗೆ ಅಲ್ಪವಾಗಿರುವುದು. ಅವರು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವರು.