2 Kings 3:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೋರಾವುನು ಮಾಡಿದನು. ಆದರೆ ಯೋರಾವುನು ಅವನ ತಂದೆತಾಯಿಗಳಂತೆ ಇರಲಿಲ್ಲ. ಸುಳ್ಳುದೇವರಾದ ಬಾಳನನ್ನು ಪೂಜಿಸಲು ತನ್ನ ತಂದೆಯು ನಿರ್ಮಿಸಿದ್ದ ಸ್ತಂಭವನ್ನು ಅವನು ಕಿತ್ತುಹಾಕಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವನು ತನ್ನ ತಂದೆತಾಯಿಗಳಷ್ಟು ದುಷ್ಟನಾಗಿರಲಿಲ್ಲ. ಆದರೂ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ತನ್ನ ತಂದೆ ಬಾಳನಿಗೋಸ್ಕರ ನಿಲ್ಲಿಸಿದ ಕಲ್ಲಿನ ಸ್ತಂಭ, ಸ್ಮಾರಕಗಳನ್ನು ತೆಗೆದುಹಾಕಿದನು.
Kannada BSI Bible 2016
ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆ ತಾಯಿಯ ಹಾಗೂ ಅಲ್ಲ; ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇವನು ತನ್ನ ತಂದೆತಾಯಿಗಳಷ್ಟು ದುಷ್ಟನಾಗಿರಲಿಲ್ಲವಾದರೂ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ತನ್ನ ತಂದೆಯು ಬಾಳನಿಗೋಸ್ಕರ ನಿಲ್ಲಿಸಿದ ಕಲ್ಲಿನ ಕಂಬವನ್ನು ತೆಗೆದುಹಾಕಿದನು.
Kannada Bible (KNCL) BSI 2016
ಇವನು ತನ್ನ ತಂದೆ ತಾಯಿಗಳಷ್ಟು ದುಷ್ಟನಾಗಿರಲಿಲ್ಲ. ಆದರೂ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ತನ್ನ ತಂದೆ ಬಾಳ್ ದೇವತೆಯ ಗೌರವಾರ್ಥ ನಿಲ್ಲಿಸಿದ ಕಲ್ಲಿನ ಕಂಬವನ್ನು ತೆಗೆದುಹಾಕಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆಯಂತೆ, ತನ್ನ ತಾಯಿಯಂತೆ ಮಾಡಲಿಲ್ಲ. ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು.