2 Kings 3:22 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೋವಾಬಿನ ಜನರು ಅಂದು ಮುಂಜಾನೆ ನಸುಕಿನಲ್ಲೇ ಮೇಲೆದ್ದರು. ಸೂರ್ಯನ ಕಿರಣಗಳು ಕಣಿವೆಯ ನೀರಿನ ಮೇಲೆ ಹೊಳೆಯುತ್ತಿದ್ದವು. ಮೋವಾಬಿನ ಜನರಿಗೆ ಅವು ರಕ್ತದಂತೆ ಕಂಡವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆಳಿಗ್ಗೆ ಎದ್ದು ನೋಡಲಾಗಿ, ಎದುರಿಗೆ ಇದ್ದ ನೀರು ಮೋವಾಬ್ಯರ ದೃಷ್ಟಿಗೆ ಬಿದ್ದಿತು. ಸೂರ್ಯಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿತ್ತು.
Kannada BSI Bible 2016
ಮೋವಾಬ್ಯರು ಉದಯಕಾಲದಲ್ಲಿ ಎದ್ದು ಆ ನೀರಿನ ಮೇಲೆ ಸೂರ್ಯನ ಪ್ರಕಾಶ ಬಿದ್ದದ್ದರಿಂದ ಆ ನೀರು ರಕ್ತದ ಹಾಗೆ ಕೆಂಪಾಗಿರುವದನ್ನು ಕಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎದುರಿಗಿದ್ದ ನೀರು ಇವರ ದೃಷ್ಟಿಗೆ ಬಿದ್ದಿತು. ಸೂರ್ಯ ಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿದ್ದದರಿಂದ ಇವರು -
Kannada Bible (KNCL) BSI 2016
ಬೆಳಿಗ್ಗೆ ಎದ್ದು ನೋಡುವಾಗ ಎದುರಿಗಿದ್ದ ನೀರು ಇವರ ದೃಷ್ಟಿಗೆ ಬಿದ್ದಿತು. ಸೂರ್ಯಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋವಾಬ್ಯರು ಉದಯಕಾಲದಲ್ಲಿ ಎದ್ದು, ಆ ನೀರಿನ ಮೇಲೆ ಸೂರ್ಯ ಪ್ರಕಾಶ ಮೂಡಿದ್ದರಿಂದ ಆಚೆಯಲ್ಲಿರುವ ಆ ನೀರು ರಕ್ತದ ಹಾಗೆ ಕೆಂಪಾಗಿರುವುದನ್ನು ಕಂಡರು.