2 Kings 3:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೋರಾವುನು ಯೆಹೂದದ ರಾಜನಾದ ಯೆಹೋಷಾಫಾಟನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಆಳ್ವಿಕೆಯಿಂದ ಮೋವಾಬಿನ ರಾಜನು ಬೇರ್ಪಟ್ಟಿದ್ದಾನೆ. ಮೋವಾಬಿನ ವಿರುದ್ಧ ಹೋರಾಡಲು ನನ್ನ ಜೊತೆ ಬರುವೆಯಾ?” ಎಂದು ಕೇಳಿದನು. ಯೆಹೋಷಾಫಾಟನು, “ಆಗಲಿ, ನಿನ್ನ ಜೊತೆ ನಾನೂ ಬರುತ್ತೇನೆ. ನಾನೂ ನೀನೂ ಒಂದೇ. ನನ್ನ ಜನರೂ ನಿನ್ನ ಜನರೂ ಒಂದೇ. ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೂದ್ಯರ ಅರಸನಾದ ಯೆಹೋಷಾಫಾಟನಿಗೆ ದೂತರ ಮುಖಾಂತರವಾಗಿ, “ಮೋವಾಬ್ಯರ ಅರಸನು ನನ್ನ ವಿರುದ್ಧವಾಗಿ ತಿರುಗಿಬಿದ್ದಿದ್ದಾನೆ. ಮೋವಾಬ್ಯರೊಡನೆ ಯುದ್ಧಮಾಡುವುದಕ್ಕೆ ನೀನೂ ನನ್ನ ಜೊತೆಯಲ್ಲಿ ಬರುತ್ತೀಯೋ?” ಎಂದು ಹೇಳಿ ಕಳುಹಿಸಿದನು. ಅದಕ್ಕೆ ಯೆಹೋಷಾಫಾಟನು, “ಬರುತ್ತೇನೆ. ನಾನೂ ನೀನೂ, ನನ್ನ ಜನರೂ, ನಿನ್ನ ಜನರೂ, ನನ್ನ ಕುದುರೆಗಳೂ, ನಿನ್ನ ಕುದುರೆಗಳೂ ಒಂದೇ ಅಲ್ಲವೋ” ಎಂದು ಉತ್ತರಕೊಟ್ಟನು.
Kannada BSI Bible 2016
ಇದಲ್ಲದೆ ಅವನು ಹೋಗಿಮೋವಾಬಿನ ಅರಸನು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾನೆ; ನೀನು ನನ್ನ ಸಂಗಡ ಮೋವಾಬಿನ ಮೇಲೆ ಯುದ್ಧಮಾಡಲು ಬರುವಿಯೋ ಎಂದು ಯೆಹೂದದ ಅರಸನಾದ ಯೆಹೋಷಾಫಾಟನಿಗೆ ಹೇಳಿ ಕಳುಹಿಸಿ ದನು. ಅದಕ್ಕವನು--ನಾನು ಬರುವೆನು; ನಾನು ನಿನ್ನ ವನೇ, ನನ್ನ ಜನರು ನಿನ್ನ ಜನರೇ, ಹಾಗೆಯೇ ನನ್ನ ಕುದುರೆಗಳು ನಿನ್ನ ಕುದುರೆಗಳಂತೆಯೇ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೂದ್ಯರ ಅರಸನಾದ ಯೆಹೋಷಾಫಾಟನಿಗೆ ದೂತರ ಮುಖಾಂತರವಾಗಿ - ಮೋವಾಬ್ಯರ ಅರಸನು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾನೆ; ಮೋವಾಬ್ಯರೊಡನೆ ಯುದ್ಧಮಾಡುವದಕ್ಕೆ ನೀನು ನನ್ನ ಜೊತೆಯಲ್ಲಿ ಬರುತ್ತೀಯೋ ಎಂದು ಹೇಳಿಕಳುಹಿಸಿದನು. ಅದಕ್ಕೆ ಯೆಹೋಷಾಫಾಟನು - ಬರುತ್ತೇನೆ; ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇಯಲ್ಲವೋ ಎಂದು ಉತ್ತರಕೊಟ್ಟು
Kannada Bible (KNCL) BSI 2016
ಯೆಹೂದ್ಯರ ಅರಸನಾದ ಯೆಹೋಷಾಫಾಟನಿಗೆ ದೂತರ ಮುಖಾಂತರ, “ಮೋವಾಬ್ಯರ ಅರಸನು ನನಗೆ ವಿರುದ್ಧ ದಂಗೆ ಎದ್ದಿದ್ದಾನೆ; ಮೋವಾಬರೊಡನೆ ಯುದ್ಧಮಾಡುವುದಕ್ಕೆ ನೀನೂ ನನ್ನ ಜೊತೆಯಲ್ಲಿ ಬರುತ್ತೀಯೋ?” ಎಂದು ಹೇಳಿ ಕಳುಹಿಸಿದನು. ಅದಕ್ಕೆ ಯೆಹೋಷಾಫಾಟನು, “ಬರುತ್ತೇನೆ; ನಾನೂ ನೀನೂ, ನನ್ನ ಜನರೂ ನಿನ್ನ ಜನರೂ ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವನು ಹೋಗಿ, “ಮೋವಾಬಿನ ಅರಸನು ನನಗೆ ವಿರೋಧವಾಗಿ ತಿರುಗಿಬಿದ್ದನು. ನೀನು ನನ್ನ ಸಂಗಡ ಮೋವಾಬಿನ ಮೇಲೆ ಯುದ್ಧಮಾಡಲು ಬರುವೆಯೋ?” ಎಂದು ಯೆಹೂದದ ಅರಸನಾದ ಯೆಹೋಷಾಫಾಟನಿಗೆ ಹೇಳಿ ಕಳುಹಿಸಿದನು. ಅದಕ್ಕವನು, “ನಾನು ಬರುವೆನು, ನಾನು ನಿನ್ನವನೇ, ನನ್ನ ಜನರು ನಿನ್ನ ಜನರೇ, ಹಾಗೆಯೇ ನನ್ನ ಕುದುರೆಗಳು ನಿನ್ನ ಕುದುರೆಗಳೇ,” ಎಂದನು.