2 Kings 4:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಂತರ ಅವಳು ಒಂದು ತಡಿಯನ್ನು ಕತ್ತೆಯ ಮೇಲೆ ಹಾಕಿ ತನ್ನ ಸೇವಕನಿಗೆ, “ಬೇಗ ಬಾ! ನಾವು ವೇಗವಾಗಿ ಸವಾರಿ ಮಾಡಿಕೊಂಡು ಹೋಗೋಣ. ನಾನು ನಿನಗೆ ಹೇಳಿದಾಗ ನಿಧಾನಿಸು!” ಎಂದು ಹೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಂತರ ಆಕೆಯು ಕತ್ತೆಗೆ ತಡಿ ಹಾಕಿಸಿ, ಅದರ ಮೇಲೆ ಕುಳಿತುಕೊಂಡು ಸೇವಕನಿಗೆ, “ಬೇಗ ಓಡಿಸು, ನಾನು ಅಪ್ಪಣೆಕೊಡುವವರೆಗೆ ನಿಲ್ಲಿಸಬೇಡ” ಎಂದು ಆಜ್ಞಾಪಿಸಿದಳು.
Kannada BSI Bible 2016
ಆಗ ಅವಳು ಕತ್ತೆಯ ಮೇಲೆ ತಡಿಯನ್ನು ಹಾಕಿಸಿ ತನ್ನ ಸೇವಕನಿಗೆ --ನಡಿಸಿಕೊಂಡು ಹೋಗು; ನಾನು ನಿನಗೆ ಹೇಳುವ ವರೆಗೂ ನನಗೋಸ್ಕರ ಸವಾರಿಯನ್ನು ತಡಮಾಡ ಬೇಡವೆಂದು ಹೇಳಿ ಕರ್ಮೆಲು ಬೆಟ್ಟದಲ್ಲಿರುವ ದೇವರ ಮನುಷ್ಯನ ಬಳಿಗೆ ಬಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ಚಿಂತೆಯಿಲ್ಲ ಎಂದು ಹೇಳಿ ಕತ್ತೆಗೆ ತಡಿಹಾಕಿಸಿ ಕೂತುಕೊಂಡು ಸೇವಕನಿಗೆ - ಹೊಡೆ, ಓಡಿಸುತ್ತಾ ಬಾ; ನಾನು ಅಪ್ಪಣೆ ಮಾಡುವವರೆಗೂ ನಿಲ್ಲಿಸಬೇಡ ಎಂದು ಆಜ್ಞಾಪಿಸಿದಳು.
Kannada Bible (KNCL) BSI 2016
ಆಕೆ, “ಚಿಂತೆಯಿಲ್ಲ,” ಎಂದು ಹೇಳಿ ಕತ್ತೆಗೆ ತಡಿಹಾಕಿಸಿ, ಕುಳಿತುಕೊಂಡು ಸೇವಕನಿಗೆ, “ಹೊಡೆ, ಓಡಿಸುತ್ತಾ ಹೋಗು; ನಾನು ಅಪ್ಪಣೆ ಮಾಡುವವರೆಗೂ ನಿಲ್ಲಿಸಬೇಡ,” ಎಂದು ಆಜ್ಞಾಪಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವಳು ಕತ್ತೆಯ ಮೇಲೆ ತಡಿಯನ್ನು ಹಾಕಿಸಿ ತನ್ನ ಸೇವಕನಿಗೆ, “ನಡೆಸಿಕೊಂಡು ಹೋಗು. ನಾನು ನಿನಗೆ ಹೇಳುವವರೆಗೂ, ನನಗೋಸ್ಕರ ಸವಾರಿಯನ್ನು ನಿಧಾನಗೊಳಿಸಬೇಡ,” ಎಂದು ಹೇಳಿ,