2 Kings 4:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವಳನ್ನು ಭೇಟಿ ಮಾಡುವುದಕ್ಕೆ ಓಡಿಹೋಗಿ ಅವಳಿಗೆ, ‘ನೀನು ಕ್ಷೇಮವಾಗಿರುವೆಯಾ? ನಿನ್ನ ಗಂಡ ಕ್ಷೇಮವಾಗಿರುವನೇ? ನಿನ್ನ ಮಗು ಕ್ಷೇಮವಾಗಿರುವುದೇ? ಎಂದು ಕೇಳು” ಎಂಬುದಾಗಿ ಹೇಳಿ ಕಳುಹಿಸಿದನು. ಅಂತೆಯೇ ಗೇಹಜಿಯು ಆಕೆಯನ್ನು ಕೇಳಿದನು. ಅವಳು “ಹೌದು, ಕ್ಷೇಮವಾಗಿದ್ದೇವೆ” ಎಂದು ಉತ್ತರಿಸಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು, ದಯವಿಟ್ಟು ಓಡಿಹೋಗಿ ಆಕೆಯನ್ನು ಎದುರುಗೊಂಡು, “ನಿನಗೂ, ನಿನ್ನ ಗಂಡನಿಗೂ, ಮಗನಿಗೂ ಕ್ಷೇಮವೋ?” ಎಂದು ವಿಚಾರಿಸು ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆಯು ಆ ಸೇವಕನಿಗೆ, “ಕ್ಷೇಮ” ಎಂದು ಉತ್ತರ ಕೊಟ್ಟು,
Kannada BSI Bible 2016
ನೀನು ಅವಳನ್ನು ಎದುರುಗೊ ಳ್ಳಲು ಓಡಿಹೋಗಿ ಅವಳಿಗೆ--ನಿನಗೆ ಕ್ಷೇಮವೋ? ನಿನ್ನ ಗಂಡನಿಗೆ ಕ್ಷೇಮವೋ? ಮಗುವಿಗೆ ಕ್ಷೇಮವೋ ಎಂದು ಕೇಳು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಗೋ, ಅಲ್ಲಿ ಶೂನೇಮ್ಯಳು! ನೀನು ಓಡಿಹೋಗಿ ಆಕೆಯನ್ನು ಎದುರುಗೊಂಡು - ನಿನಗೂ ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೋ ಎಂದು ವಿಚಾರಿಸು ಎಂಬದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆಯು ಆ ಸೇವಕನಿಗೆ - ಕ್ಷೇಮ ಎಂದು ಉತ್ತರಕೊಟ್ಟು
Kannada Bible (KNCL) BSI 2016
“ಅಗೋ, ಅಲ್ಲಿ ಶೂನೇಮ್ಯಳು; ನೀನು ಓಡಿಹೋಗಿ ಆಕೆಯನ್ನು ಭೇಟಿಯಾಗು; ‘ನಿನಗೂ ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ?’ ಎಂದು ವಿಚಾರಿಸು,” ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆ ಆ ಸೇವಕನಿಗೆ, “ಕ್ಷೇಮ,” ಎಂದು ಉತ್ತರಕೊಟ್ಟು, ಬೆಟ್ಟದ ಮೇಲಿದ್ದ ದೈವಪುರುಷನ ಬಳಿಗೆ ಬಂದು, ಅವನ ಪಾದಗಳನ್ನು ಹಿಡಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಅವಳನ್ನು ಎದುರುಗೊಳ್ಳಲು ಓಡಿಹೋಗಿ, ಅವಳಿಗೆ, ‘ನಿನಗೂ, ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ? ಎಂದು ಕೇಳು,’ ” ಎಂದನು. ಅವಳು, “ಕ್ಷೇಮ” ಎಂದಳು.