2 Kings 4:41 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಎಲೀಷನು, “ಸ್ವಲ್ಪ ಹಿಟ್ಟನ್ನು ತನ್ನಿ” ಎಂದು ಹೇಳಿದನು. ಅವರು ಎಲೀಷನ ಬಳಿಗೆ ಹಿಟ್ಟನ್ನು ತಂದರು. ಅವನು ಅದನ್ನು ಪಾತ್ರೆಯೊಳಗೆ ಹಾಕಿದನು. ನಂತರ ಎಲೀಷನು, “ಜನರಿಗೆ ಸಾರನ್ನು ಬಡಿಸಿ, ಅವರು ಊಟಮಾಡಲಿ” ಎಂದು ಹೇಳಿದನು. ಆಗ ಆ ಸಾರಿನಲ್ಲಿ ಯಾವ ದೋಷವೂ ಇರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಎಲೀಷನು, “ಹಿಟ್ಟನ್ನು ತಂದು ಕೊಡಿರಿ” ಎಂದು ಹೇಳಿದನು. ಅವರು ತಂದಾಗ, ಅದನ್ನು ಆ ಪಾತ್ರೆಯೊಳಗೆ ಹಾಕಿ, “ಈಗ ಇದನ್ನು ಬಡಿಸಬಹುದು. ಜನರು ಇದನ್ನು ಊಟಮಾಡಲಿ” ಎಂದನು. ಕೂಡಲೇ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಯಿತು.
Kannada BSI Bible 2016
ಆಗ ಅವನು ಹಿಟ್ಟನ್ನು ತಕ್ಕೊಂಡು ಬರ ಹೇಳಿ ಅದನ್ನು ಗಡಿಗೆಯಲ್ಲಿ ಹಾಕಿ ಜನರು ತಿನ್ನುವದಕ್ಕೆ ಬಡಿಸಿರಿ ಅಂದನು. ಆಗ ಆ ಗಡಿಗೆಯಲ್ಲಿ ಕೆಟ್ಟದ್ದೇನೂ ಇರಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವನು - ಹಿಟ್ಟನ್ನು ತಂದುಕೊಡಿರಿ ಎಂದು ಹೇಳಿದನು; ಅವರು ತರಲು ಅದನ್ನು ಆ ಪಾತ್ರೆಯೊಳಗೆ ಹಾಕಿ ಈಗ ಇದನ್ನು ಬಡಿಸಬಹುದು ಅಂದನು. ಕೂಡಲೆ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಯಿತು.
Kannada Bible (KNCL) BSI 2016
ಆಗ ಅವನು, “ಹಿಟ್ಟನ್ನು ತಂದುಕೊಡಿ,” ಎಂದು ಹೇಳಿದನು; ಅವರು ತರಲು ಅದನ್ನು ಆ ಪಾತ್ರೆಯೊಳಗೆ ಹಾಕಿ, “ಈಗ ಇದನ್ನು ಬಡಿಸಬಹುದು,” ಎಂದನು. ಕೂಡಲೆ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಎಲೀಷನು ಹಿಟ್ಟನ್ನು ತೆಗೆದುಕೊಂಡು ಬರಲು ಹೇಳಿ, ಅದನ್ನು ಗಡಿಗೆಯಲ್ಲಿ ಹಾಕಿ, “ಈಗ ಇದನ್ನು ಜನರಿಗೆ ಬಡಿಸಿರಿ,” ಎಂದನು. ಆಗ ಆ ಗಡಿಗೆಯಲ್ಲಿನ ವಿಷವೆಲ್ಲಾ ಹೋಗಿತ್ತು.