2 Kings 6:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಅರಾಮ್ಯರ ರಾಜನು ಕುದುರೆಗಳನ್ನು, ರಥಗಳನ್ನು ಮತ್ತು ದೊಡ್ಡ ಸೇನೆಯನ್ನು ದೋತಾನಿಗೆ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ನಗರವನ್ನು ಸುತ್ತುವರಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅರಸನು ರಥರಥಾಶ್ವ ಸಹಿತವಾದ ಮಹಾಸೈನ್ಯವನ್ನು ದೋತಾನಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲಿ ಆ ಪಟ್ಟಣವನ್ನು ಸಮೀಪಿಸಿ ಅದಕ್ಕೆ ಮುತ್ತಿಗೆ ಹಾಕಿದರು.
Kannada BSI Bible 2016
ಆದದರಿಂದ ಅವನು ಅಲ್ಲಿಗೆ ಕುದುರೆ ಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿ ದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಥರಥಾಶ್ವಸಹಿತವಾದ ಮಹಾಸೈನ್ಯವನ್ನು ಅಲ್ಲಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲಿ ಆ ಪಟ್ಟಣವನ್ನು ಸಮೀಪಿಸಿ ಅದಕ್ಕೆ ಮುತ್ತಿಗೆಹಾಕಿದರು.
Kannada Bible (KNCL) BSI 2016
ಆ ಪ್ರವಾದಿ ದೋತಾನಿನಲ್ಲಿರುತ್ತಾನೆಂದು ತಿಳಿದುಕೊಂಡು ರಥರಥಾಶ್ವಸಹಿತವಾದ ಮಹಾಸೈನ್ಯವನ್ನು ಅಲ್ಲಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲೇ ಆ ಪಟ್ಟಣವನ್ನು ಸಮೀಪಿಸಿ, ಅದಕ್ಕೆ ಮುತ್ತಿಗೆ ಹಾಕಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಅರಾಮ್ಯರ ಅರಸನು ಅಲ್ಲಿಗೆ ಕುದುರೆಗಳನ್ನೂ ರಥಗಳನ್ನೂ ಮಹಾಸೈನ್ಯವನ್ನೂ ಕಳುಹಿಸಿದನು. ಅವರು ರಾತ್ರಿಯಲ್ಲಿ ಬಂದು ಪಟ್ಟಣವನ್ನು ಸುತ್ತಿಕೊಂಡರು.