2 Kings 6:23 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ಆಹಾರವನ್ನು ಹೇರಳವಾಗಿ ಸಿದ್ಧಪಡಿಸಿದನು. ಅರಾಮ್ಯರ ಸೇನೆಯು ಊಟಮಾಡಿ, ನೀರನ್ನು ಕುಡಿದರು. ನಂತರ ಇಸ್ರೇಲಿನ ರಾಜನು ಅರಾಮ್ಯರ ಸೇನೆಗೆ ತಮ್ಮ ಒಡೆಯನ ಬಳಿಗೆ ಹೋಗಲು ಆಜ್ಞಾಪಿಸಿದನು. ಅಂದಿನಿಂದ ಇಸ್ರೇಲ್ ದೇಶದ ಮೇಲೆ ಧಾಳಿಮಾಡಲು ಯಾವ ಸೈನಿಕರನ್ನೂ ಅರಾಮ್ಯರು ಕಳುಹಿಸಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅರಸನು ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ಅವರು ಅನ್ನ ಪಾನಗಳನ್ನು ತೆಗೆದುಕೊಂಡಾದ ಮೇಲೆ ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆ ಮಾಡುವ ಅರಾಮ್ಯರ ಗುಂಪುಗಳು ಇಸ್ರಾಯೇಲರ ಪ್ರಾಂತ್ಯದೊಳಗೆ ಮತ್ತೆ ಬರಲೇ ಇಲ್ಲ.
Kannada BSI Bible 2016
ಆಗ ಅರಸನು ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿ ಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್‌ ದೇಶದಲ್ಲಿ ತಿರಿಗಿ ಬಾರದೆ ಹೋದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅರಸನು ಅವರಿಗೋಸ್ಕರ ದೊಡ್ಡ ಔತಣವನ್ನು ಮಾಡಿಸಿ ಅವರು ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆಮಾಡುವ ಅರಾಮ್ಯರ ಗುಂಪುಗಳು ಇಸ್ರಾಯೇಲ್ಯರ ಪ್ರಾಂತದೊಳಗೆ ತಿರಿಗಿ ಬರಲಿಲ್ಲ.
Kannada Bible (KNCL) BSI 2016
ಆಗ ಅರಸನು ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ, ಅವರು ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ, ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆಮಾಡುವ ಸಿರಿಯಾದ ಗುಂಪುಗಳು ಇಸ್ರಯೇಲರ ಪ್ರಾಂತದೊಳಗೆ ಮತ್ತೆ ಬರಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರಿಗೋಸ್ಕರ ದೊಡ್ಡ ಔತಣ ಮಾಡಿಸಿದನು. ಅವರು ತಿಂದು ಕುಡಿದ ತರುವಾಯ ಅವರನ್ನು ಕಳುಹಿಸಿಬಿಟ್ಟನು. ಅವರು ತಮ್ಮ ಯಜಮಾನನ ಬಳಿಗೆ ಹೋದರು. ಅರಾಮ್ಯರ ದಂಡುಗಳು ಇಸ್ರಾಯೇಲ್ ದೇಶದ ಮೇಲೆ ಮತ್ತೆ ದಾಳಿಮಾಡಲಿಲ್ಲ.